ಜಾನ್ಸನ್ ಆಂಡ್ ಜಾನ್ಸನ್ ನ ಸಿಂಗಲ್ ಡೋಸ್ ಕೋವಿಡ್ ಲಸಿಕೆಯ ಬಳಕೆಗೆ ಭಾರತ ಸರ್ಕಾರದ ಅನುಮತಿ

Prasthutha|

ನವದೆಹಲಿ: ಅಮೇರಿಕಾ ಮೂಲಕ ಜಾನ್ಸನ್ ಆಂಡ್ ಜಾನ್ಸನ್ ಕಂಪೆನಿಯ ಕೋವಿಡ್ 19 ಲಸಿಕೆಯನ್ನು ಬಳಸಲು ಭಾರತ ಅನುಮೋದಿಸಿದೆಯೆಂದು ಕೇಂದ್ರ ಆರೋಗ್ಯ ಸಚಿವರಾದ ಮನ್ಸೂಖ್ ಮಾಂಡವಿಯಾ ಟ್ವೀಟ್ ಮೂಲಕ ತಿಳಿಸಿದ್ದಾರೆ. ಜಾನ್ಸನ್ ಆಂಡ್ ಜಾನ್ಸನ್ ಕಂಪೆನಿ ವತಿಯಿಂದ ಸಿಂಗಲ್ ಡೋಸ್ ಲಸಿಕೆಗೆ ಭಾರತದಲ್ಲಿ ಚಾಲನೆ ನೀಡಲಾಗಿದೆ. ಈ ಮೂಲಕ ಭಾರತ ಕೋವಿಡ್ ವಿರುದ್ಧ ಹೋರಾಟದ ಬಲವನ್ನು ಇನ್ನಷ್ಟು ಹೆಚ್ಚಿಸಿದೆಯೆಂದು ಅವರು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

ಭಾರತದ ಲಸಿಕೆ ತಯಾರಿಕಾ ಕಂಪೆನಿಯಾದ ಬಯೋಲಾಜಿಕಲ್ ಇ ಲಿಮಿಟೆಡ್ ನೊಂದಿಗೆ ನಡೆಯುವ ಒಪ್ಪಂದದ ನಂತರ ಜಾನ್ಸನ್ ಆಂಡ್ ಜಾನ್ಸನ್ ಲಸಿಕೆ ಭಾರತದಲ್ಲಿ ಲಭ್ಯವಾಗಲಿದೆ. ಮಾತ್ರವಲ್ಲದೇ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಕೋವಿಡ್ 19 ಅನ್ನು ತಡೆಗಟ್ಟಲು ಸಿಂಗಲ್ ಡೋಸ್ ಆಗಿ ಈ ಲಸಿಕೆಯನ್ನು ಪಡೆಯಬಹುದು. ಈ ಲಸಿಕೆ ಆಗಸ್ಟ್ 7, 2021 ರಿಂದ ತುರ್ತಾಗಿ ಬಳಸಲು ದೃಡೀಕರಣ ಪತ್ರ ಲಭಿಸಿರುವುದು ನಮಗೆ ಸಂತಸ ತಂದಿದೆಯೆಂದು ಜಾನ್ಸನ್ ಆಂಡ್ ಜಾನ್ಸನ್ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ



Join Whatsapp