ತನ್ನ ಹೇಳಿಕೆ ತಪ್ಪೆಂದು ಸಾಬೀತುಪಡಿಸಿದರೆ ‘ಪದ್ಮಶ್ರೀ’ ಹಿಂದಿರುಗಿಸುವೆ: ಕಂಗನಾ ಸವಾಲು

Prasthutha|

ಮುಂಬೈ: ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ತನ್ನ ಹೇಳಿಕೆಗಳು ತಪ್ಪು ಎಂದು ಸಾಬೀತುಪಡಿಸಿದರೆ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

- Advertisement -

ಆ ಸಂದರ್ಶನದಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿರುತ್ತೇನೆ. ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮಿ ಭಾಯಿ ಮತ್ತು ವೀರ್ ಸಾವರ್ಕರ್ಜಿ ಅವರ ನೇತೃತ್ವದಲ್ಲಿ 1857 ರಲ್ಲಿ ಮೊದಲ ಸ್ವಾತಂತ್ರ್ಯ ಲಭಿಸಿತ್ತು. 1947 ರಲ್ಲಿ ಹೋರಾಟ ನಡೆದಿರುವ ಬಗ್ಗೆ ನನಗೆ ತಿಳಿದಿಲ್ಲ. ಯಾರಾದರೂ ಆ ಕುರಿತು ಹೇಳಿಕೊಟ್ಟರೆ ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿ ಕ್ಷಮೆ ಕೇಳುತ್ತೇನೆ. ದಯವಿಟ್ಟು ಈ ಬಗ್ಗೆ ನನಗೆ ಸಹಾಯ ಮಾಡಿ”ಎಂದು ಕಂಗನಾ ಹೇಳಿದ್ದಾರೆ.

ರಾಷ್ಟ್ರೀಯ ಮಾಧ್ಯಮವೊಂದರ ವಾರ್ಷಿಕ ಶೃಂಗಸಭೆಯಲ್ಲಿ ಕಂಗನಾ ರಾಣಾವತ್ ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು.

Join Whatsapp