ಕೋವಿಶೀಲ್ಡ್ ನ ಮೊದಲ ಮತ್ತು ಎರಡನೇ ಲಸಿಕೆಯ ನಡುವಿನ ಅಂತರದ ದಿನಗಳನ್ನು ಹೆಚ್ಚಿಸಿದ ಸರಕಾರ !

Prasthutha|

ಕೋವಿಡ್ ನ ಮೊದಲನೇ ಡೋಸ್ ಪಡೆದವರು ಎರಡನೇ ಲಸಿಕೆಯ ಡೋಸ್ ಗಾಗಿ ಪಡುತ್ತಿರುವ ಪಾಡು ಇನ್ನು ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಸರಕಾರ ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯಲು ಇದ್ದ ದಿನಗಳ ಅಂತರವನ್ನು 12 ರಿಂದ 16 ವಾರಗಳಿಗೆ ಹೆಚ್ಚಿಸಿದೆ. ಈ ಮೊದಲು ಈ ಅಂತರ 6 ರಿಂದ 8 ವಾರಗಳ ವರೆಗೆ ಇತ್ತು. ಸರಕಾರದ ಈ ನಡೆ ಕೂಡಾ ತೀವ್ರ ಟೀಕೆಗೆ ಗುರಿಯಾಗಿದೆ. ಸರಕಾರ ತನ್ನ ವಾಕ್ಸಿನ್ ಸ್ಟಾಕ್ ಇಲ್ಲ ಎಂದು ಒಪ್ಪಿಕೊಳ್ಳದೆ ಎರಡು ಡೋಸ್ ಗಳ ನಡುವಿನಾಂತರವನ್ನು ಹೆಚ್ಚಿಸಿದೆ ಎಂದು ಹಲವರು ಟೀಕಿಸಿದ್ದಾರೆ.

- Advertisement -

ಕರ್ನಾಟಕ ಆರೋಗ್ಯ ಇಲಾಖೆ ಕೂಡಾ ಈ ಕುರಿತು ಟ್ವೀಟ್ ಮಾಡಿದ್ದು, ಕೋವಿಶೀಲ್ಡ್ ಲಸಿಕೆಯ 2 ಡೋಸ್ ಗಳ ನಡುವಿನ ಹಿಂದಿನ ಅಂತರ 6 ರಿಂದ 8 ವಾರಗಳನ್ನು12 ರಿಂದ 16 ವಾರಗಳಿಗೆ ಪರಿಷ್ಕರಿಸಲಾಗಿದೆ. ಕೋವಿಶೀಲ್ಡ್ ನ ಲಸಿಕೆಯ ಮೊದಲ ಡೋಸ್ ಪಡೆದ ನಂತರ 12 ವಾರಗಳನ್ನು ಇನ್ನೂ ಪೂರ್ಣಗೊಳಿಸದ ನಾಗರೀಕರು ಲಸಿಕಾ ಕೇಂದ್ರಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಬರಬಾರದೆಂದು ವಿನಂತಿಸಲಾಗಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದೆ.

ಇದೇ ವೇಳೆ ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ಈ ಕುರಿತು ಟ್ವೀಟ್ ಮಾಡಿದ್ದು, ಕೋವಿಡ್ ಲಸಿಕೆಯ ಎರಡು ಡೋಸ್ ಗಳ ಅಂತರ ಮೊದಲು 4  ವಾರಗಳ ಕಾಲಾವಧಿ ಇತ್ತು. ಆ ಬಳಿಕ ಅದು 6 ರಿಂದ 8 ವಾರಗಳಿಗೆ ಏರಿಸಿದರು. ಈಗ 12 ರಿಂದ 16 ವಾರಗಳಿಗೆ ಹೆಚ್ಚಿಸಿದ್ದಾರೆ. ಇದು ಸರಕಾರದ ಬಳಿ ಸ್ಟಾಕ್ ಇಲ್ಲವೆನ್ನುವುದಕ್ಕೆ ಪುರಾವೆಯೇ ಅಥವಾ ಈ ಕುರಿತು ಯಾರಾದರೂ ತಜ್ಞರ ತಂಡ ವೈಜ್ಞಾನಿಕ ಸಲಹೆ ನೀಡಿದೆಯೇ?  ಮೋದಿ ಸರಕಾರದಿಂದ ಈ ಕುರಿತು ಪಾರದರ್ಶಕ ಹೇಲಿಕೆಯನ್ನು ನಿರೀಕ್ಷಿಸಬಹುದೇ? ಎಂದು ಅವರು ಟ್ವೀಟ್ ಮಾಡಿದ್ದಾರೆ.

Join Whatsapp