ದಾರಿತಪ್ಪಲು ಮುಸ್ಲಿಮರು ಸಣ್ಣ ಮಕ್ಕಳಲ್ಲ: ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಹೇಳಿಕೆಗೆ ಊವೈಸಿ ಪ್ರತಿಕ್ರಿಯೆ

Prasthutha: October 26, 2020

ಹೈದರಾಬಾದ್: ಮುಸ್ಲಿಮರು ಸಿ.ಎ.ಎ ವಿರೋಧಿ ಪ್ರತಿಭಟನಾಕಾರರಿಂದ ದಿಕ್ಕುತಪ್ಪಿದ್ದಾರೆ ಎಂಬ ರಾಷ್ಟ್ರೀಯ ಸ್ವಯಂಸೇವಕ್ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ರನ್ನು ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್ ಎ ಇತ್ತಹಾದುಲ್ ಮುಸ್ಲಿಮೀನ್) ಅಧ್ಯಕ್ಷ ಅಸದುದ್ದೀನ್ ಉವೈಸ್ ತೀವ್ರವಾಗಿ ಟೀಕಿಸಿದ್ದಾರೆ. ದಾರಿ ತಪ್ಪುವುದಕ್ಕೆ ಮುಸ್ಲಿಮರು ಸಣ್ಣ ಮಕ್ಕಳಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

“ಸಿ.ಎ.ಎ+ಎನ್.ಆರ್.ಸಿ ಯ ಅರ್ಥವೇನು ಎಂದು ಬಿಜೆಪಿ ಒಂದು ಶಬ್ದವನ್ನೂ ಆಡಿಲ್ಲ. ಅದು ಮುಸ್ಲಿಮರಿಗೆ ಸಂಬಂಧಿಸಿದ ಕಾನೂನಲ್ಲದಿದ್ದರೆ ಧರ್ಮಗಳ ಕುರಿತು ಇರುವ ಎಲ್ಲಾ ಉಲ್ಲೇಖಗಳನ್ನು ಆ ಕಾನೂನಿನಿಂದ ತೆಗೆದುಹಾಕಬಹುದಲ್ಲವೇ?” ಎಂದು ಅವರು ಹೇಳಿದ್ದಾರೆ.

ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳ ಮಧ್ಯ ಜಾತ್ಯತೀತ ಪಕ್ಷಗಳ ಮೌನವನ್ನು ಅವರು ಟೀಕಿಸಿದ್ದಾರೆ.

“ಪೌರತ್ವಕ್ಕೆ ಧರ್ಮವನ್ನು ಆಧಾರವಾಗಿ ಕೇಳುವ ಯಾವುದೇ ಕಾನೂನನ್ನು ನಾವು ವಿರೋಧಿಸುತ್ತೇವೆ. ಮತ್ತು ಹೋರಾಟದ ಸಂದರ್ಭದಲ್ಲಿ ತಮ್ಮ ಮೌನವನ್ನು ನಾವು ಮರೆತಿಲ್ಲ ಎಂಬುದನ್ನು ಕಾಂಗ್ರೆಸ್, ಆರ್.ಜೆ.ಡಿ ಮತ್ತು ಅವರ ಸಂತತಿಗಳಿಗೆ ಹೇಳಬಯಸುತ್ತೇವೆ” ಎಂದು ಅವರು ಹೇಳಿದರು.

ರವಿವಾರದಂದು ಭಾಗವತ್ ದೇಶವನ್ನುದ್ದೇಶಿಸಿ ಮಾಡಿದ ತನ್ನ ಭಾಷಣದಲ್ಲಿ, “ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡುವ ನೆಪದಲ್ಲಿ ಅವಕಾಶವಾದಿಗಳು ಹಿಂಸೆಯನ್ನು ಬೆಂಬಲಿಸಿದರು. ಸಿ.ಎ.ಎ ಯಾವುದೇ ನಿರ್ದಿಷ್ಟ ಸಮುದಾಯವನ್ನು ವಿರೋಧಿಸುವುದಿಲ್ಲ. ಆದರೆ ಈ ಹೊಸ ಕಾನೂನನ್ನು ವಿರೋಧಿಸ ಬಯಸಿದವರು, ಅದನ್ನು ಮುಸ್ಲಿಂ ಜನಸಂಖ್ಯೆಯನ್ನು ನಿರ್ಬಂಧಿಸುವ ಗುರಿ ಹೊಂದಿದೆಯೆಂಬ ಸುಳ್ಳನ್ನು ಪ್ರಚುರಪಡಿಸಿ ಮುಸ್ಲಿಂ ಸಹೋದರರ ದಿಕ್ಕುತಪ್ಪಿಸಿದರು” ಎಂದು ಹೇಳಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!