ಫ್ರೆಂಚ್ ಅಧ್ಯಕ್ಷರ ಇಸ್ಲಾಮ್ ವಿರೋಧಿ ಹೇಳಿಕೆ | ಫ್ರಾನ್ಸ್ ಉತ್ಪನ್ನಗಳ ನಿಷೇಧಕ್ಕೆ ಕರೆ

Prasthutha|

ಅಬು ಧಾಬಿ : ಫ್ರಾನ್ಸ್ ಅಧ್ಯಕ್ಷ ಎಮ್ಮಾನ್ಯುವೆಲ್ ಮ್ಯಾಕ್ರೊನ್ ಅವರ ಇಸ್ಲಾಮ್ ವಿರೋಧಿ ಹೇಳಿಕೆ ಖಂಡಿಸಿ, ಫ್ರೆಂಚ್ ಉತ್ಪನ್ನಗಳನ್ನು ನಿಷೇಧಿಸುವಂತೆ ಕೆಲವು ಅರಬ್ ಟ್ರೇಡ್ ಅಸೋಸಿಯೇಶನ್ ಗಳು ಕರೆ ನೀಡಿವೆ.

- Advertisement -

ಈ ತಿಂಗಳಾರಂಭದಲ್ಲಿ ಮ್ಯಾಕ್ರೊನ್ ಮಾತನಾಡುತ್ತಾ, ಇಸ್ಲಾಮಿ ಪ್ರತ್ಯೇಕತವಾದದ ವಿರುದ್ಧ ಹೋರಾಟ ಮಾಡುವುದಾಗಿ ಘೋಷಿಸಿದ್ದರು. ಈ ವೇಳೆ ಫ್ರಾನ್ಸ್ ನಲ್ಲಿ ಮುಸ್ಲಿಮ್ ಸಮುದಾಯಗಳ ಮೇಲೆ ನಿಯಂತ್ರಣ ಹೇರುವ ಬಗ್ಗೆ ಮಾತನಾಡಿದ್ದರು.

ಜಗತ್ತಿನಾದ್ಯಂತ ಇಸ್ಲಾಮ್ ಬಿಕ್ಕಟ್ಟಿನಲ್ಲಿರುವ ಧರ್ಮ ಎಂಬಂತೆ ಅವರು ವಿಶ್ಲೇಷಿಸಿದ್ದರು. 1905ರಲ್ಲಿ ಫ್ರಾನ್ಸ್ ನಲ್ಲಿ ಚರ್ಚ್ ಮತ್ತು ಸರಕಾರವನ್ನು ಪ್ರತ್ಯೇಕಿಸಿದ್ದ ಕಾನೂನನ್ನು ಬಲಪಡಿಸಲು ಮುಂದಿನ ತಿಂಗಳು ಮಸೂದೆ ಮಂಡಿಸಲಾಗುವುದು ಎಂದು ಅವರು ಹೇಳಿದ್ದರು.

- Advertisement -

ಈ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಗಳು ಮತ್ತು ಟರ್ಕಿಯಲ್ಲಿ ಫ್ರೆಂಚ್ ಉತ್ಪನ್ನಗಳಿಗೆ ನಿಷೇಧ ಹೇರಲು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಲಾಗಿದೆ. #BoycottFrenchProducts ಮತ್ತು #ExceptGodsMessenger ಹ್ಯಾಶ್ ಟ್ಯಾಗ್ ಗಳು ಕುವೈತ್, ಕತಾರ್, ಪೆಲೆಸ್ತೀನ್, ಈಜಿಪ್ಟ್, ಅಲ್ಜೀರಿಯಾ, ಜೋರ್ಡಾನ್, ಸೌದಿ ಅರೇಬಿಯಾ ಮತ್ತು ಟರ್ಕಿಯಲ್ಲಿ ಇಂಗ್ಲಿಷ್ ಮತ್ತು ಅರೇಬೀಕ್ ನಲ್ಲಿ ಟ್ರೆಂಡ್ ಆಗಿವೆ.

ಕುವೈತ್ ನಲ್ಲಿ ಅಲ್-ನಯೀಮ್ ಕೋ-ಆಪರೇಟಿವ್ ಸೊಸೈಟಿ ಎಲ್ಲಾ ಫ್ರೆಂಚ್ ಉತ್ಪನ್ನಗಳನ್ನು ನಿಷೇಧಿಸಲು ನಿರ್ಧರಿಸಿದೆ ಮತ್ತು ತಮ್ಮ ಶೋರೂಂಗಳಲ್ಲಿ ಅಲ್ಲಿನ ಉತ್ಪನ್ನಗಳನ್ನು ಹಿಂಪಡೆಯಲು ನಿರ್ಧರಿಸಿದೆ. ದಹಿಯತ್ ಅಲ್-ತುಹರ್ ಅಸೋಸಿಯೇಶನ್ ಕೂಡ ಇದೇ ಕ್ರಮ ಕೈಗೊಂಡಿದೆ.

ಕತಾರ್ ನಲ್ಲಿ ವಾಜ್ ಬಾ ಡೈರಿ ಕಂಪೆನಿ, ಅಲ್ ಮೀರಾ ಕನ್ಸ್ಯೂಮರ್ ಗೂಡ್ಸ್ ಕಂಪೆನಿ ಕೂಡ ಫ್ರೆಂಚ್ ಉತ್ಪನ್ನ ಮಾರಾಟ ಮಾಡದಿರಲು ನಿರ್ಧರಿಸಿವೆ. ಕತಾರ್ ವಿಶ್ವವಿದ್ಯಾಲಯ ಕೂಡ ಈ ಅಭಿಯಾನದಲ್ಲಿ ಪಾಲ್ಗೊಂಡಿದೆ.

Join Whatsapp