ಅಪರಾಧಗಳಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನ: ಬಿಜೆಪಿ ವಿರುದ್ಧ ಅಖಿಲೇಶ್ ವಾಗ್ದಾಳಿ

Prasthutha|

ಲಕ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಉಂಟಾಗಿರುವ ಕಾನೂನು ಉಲ್ಲಂಘನೆಗಳನ್ನು ಸಮಾಜವಾದಿ ಪಕ್ಷದ ಮೆಲೆ ಎತ್ತಿ ಕಟ್ಟಲಾಗುತ್ತಿದೆ ಎಂದು ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಬಿಜೆಪಿ ಸುಳ್ಳುಗಳ ಮೂಲಕ ಮತದಾರರನ್ನು ವಂಚಿಸಲು ಪ್ರಯತ್ನಿಸುತ್ತಿದೆ ಎಂದು ಯಾದವ್ ಹೇಳಿದರು.
ಅಪರಾಧ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ ಎಂದು ಆರೋಪಿಸಿರುವ ಅಖಿಲೇಶ್ ಯಾದವ್, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಡೇಟಾವನ್ನು ನೋಡಿದರೆ ಯುಪಿಯಲ್ಲಿ ಮಹಿಳೆಯರ ಮೇಲೆ ನಡೆದ ಕೃತ್ಯಗಳ ಅತಿ ಹೆಚ್ಚು ಅಪರಾಧಗಳು ಮತ್ತು ಕಸ್ಟಡಿ ಸಾವುಗಳಸಂಖ್ಯೆ ಹೆಚ್ಚು ಇವೆ ಎಂದು ಅವರು ಹೇಳಿದರು.



Join Whatsapp