ಗೋಹತ್ಯೆ ಶಂಕಿತನ ತಾಯಿಯನ್ನು ಗುಂಡಿಕ್ಕಿ ಕೊಂದ ಉತ್ತರ ಪ್ರದೇಶ ಪೊಲೀಸರು

Prasthutha|

ಲಕ್ನೋ: ಗೋಹತ್ಯೆ ಪ್ರಕರಣದ ಆರೋಪಿಯ ಮನೆ ಮೇಲೆ ದಾಳಿ ನಡೆಸಿದ ಪೊಲೀಸರ ಗುಂಡೇಟಿಗೆ 50 ವರ್ಷದ ಶಂಕಿತನ ತಾಯಿ ಸಾವನ್ನಪ್ಪಿದ್ದಾರೆ.

- Advertisement -

ವಿಚಾರಣೆಗಾಗಿ ಶನಿವಾರ ರಾತ್ರಿ, ಸಿದ್ಧಾರ್ಥನಗರ ಕೊತ್ವಾಲಿಯ ಪೊಲೀಸ್ ತಂಡವು ಕೊಡ್ರಾಕ್ರಾಂಟ್ ಗ್ರಾಮದ ತೋಲಾ ಇಸ್ಲಾಂನಗರ ಪ್ರದೇಶದಲ್ಲಿರುವ ಅಬ್ದುಲ್ ರೆಹಮಾನ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದು ದಾಳಿ ವೇಳೆ ಅಬ್ದುಲ್ ರೆಹಮಾನ್ ಅವರ ತಾಯಿ ರೋಶಿನಿ ಅವರ ಬೆನ್ನಿಗೆ ಪೊಲೀಸರು ಗುಂಡು ಹಾರಿಸಿದ್ದು ರೋಶಿನಿಯ ಕುಟುಂಬ ಸದಸ್ಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿವೆ. 

ಮೃತ ಮಹಿಳೆಯ ಕುಟುಂಬದಿಂದ ಪೊಲೀಸರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದ್ದು ದಾಳಿ ಸಮಯದಲ್ಲಿ ನಮ್ಮ ಮೇಲೆ ಅಪ್ರಚೋದಿತವಾಗಿ ಹಲ್ಲೆ ನಡೆಸಲಾದ ಹಿನ್ನಲೆಯಲ್ಲಿ ಈ ಶೂಟೌಟ್ ಸಂಭವಿಸಿದೆ ಎಂದು ಪೊಲೀಸರು ಪ್ರತಿಕ್ರಯಿಸಿದ್ದಾರೆ.



Join Whatsapp