ಉತ್ತರ ಪ್ರದೇಶ: ಮಥುರಾ ವಿವಾದವು ಪೂಜಾ ಸ್ಥಳಗಳ ಕಾಯ್ದೆಯಡಿ ಬರುವುದಿಲ್ಲ ಎಂದ ನ್ಯಾಯಾಲಯ

Prasthutha|

ಮಥುರಾ: ಶಾಹಿ ಈದ್ಗಾ ಮಸೀದಿಯನ್ನು ಪೂಜಾ ಸ್ಥಳಗಳ ವಿಶೇಷ ನಿಬಂಧನೆಗಳ ಕಾಯ್ದೆ 1991  ಅಧೀನದಿಂದ ತೆಗೆದುಹಾಕಬೇಕು ಎಂಬ ಅರ್ಜಿಯನ್ನು ಪುರಸ್ಕರಿಸಿದ ಮಥುರಾ ನ್ಯಾಯಾಲಯವು, ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಪ್ರಕರಣದಲ್ಲಿ 1991 ರ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಹೇಳಿದೆ.

- Advertisement -

ವಿವಾದಿತ ಭೂಮಿಯನ್ನು ವಿಭಜಿಸುವ ರಾಜಿ ಆದೇಶಕ್ಕೆ 1968ರಲ್ಲಿ ಸಹಿ ಹಾಕಲಾಗಿದ್ದು, ಅದರನ್ವಯ ಆರಾಧನಾ ಸ್ಥಳಗಳ ಕಾಯಿದೆಯಲ್ಲಿ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಖಚಿತ ಪಡಿಸಿಕೊಳ್ಳುವುದನ್ನು ನಿರ್ಬಂಧಿಸಿಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಮೌಖಿಕವಾಗಿ ಹೇಳಿದ್ದು, ದೇಶದಲ್ಲಿನ ಧಾರ್ಮಿಕ ರಚನೆಗಳ ಸ್ವರೂಪ ಮತ್ತು ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಮಹತ್ವದ ಅಭಿಪ್ರಾಯ ಎಂದು ಪರಿಗಣಿಸಲ್ಪಟ್ಟಿದೆ.

ಮುಸ್ಲಿಮ್ ಕಕ್ಷಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹುಜೇಫಾ ಅಹ್ಮದಿ ಅವರು ರಾಮಜನ್ಮ ಭೂಮಿ ಆಂದೋಲನದ ಸಂದರ್ಭದಲ್ಲಿ ಆರಾಧನಾ ಸ್ಥಳಗಳ ಕಾಯಿದೆ 1991ಯನ್ನು ಜಾರಿಗೆ ತರಲಾಗಿದ್ದು 1947ರ ಆಗಸ್ಟ್ 15ರಲ್ಲಿ ಆರಾಧನಾ ಸ್ಥಳಗಳು ಯಾವ ರೀತಿಯಿದ್ದವೋ ಅದೇ ಯಥಾಸ್ಥಿತಿಯನ್ನು ರಕ್ಷಿಸುವ ಉದ್ದೇಶವನ್ನು ಕಾಯಿದೆ ಹೊಂದಿದೆ. ಆದ್ದರಿಂದ  ಈ ತೀರ್ಪಿನಿಂದ 1991ರ ಕಾಯಿದೆಯು ಉಪಯೋಗಕ್ಕೆ ಬಾರದ ಕಾಗದವಾಗುತ್ತದೆ. ಇಂಥ ವಿವಾದಗಳನ್ನು ನಿರ್ಬಂಧಿಸುವುದು ಆ ಕಾಯಿದೆಯ ಉದ್ದೇಶವಾಗಿದೆ” ಎಂದು ಹೇಳಿದರು.

- Advertisement -

ವಾರಾಣಸಿಯ ಸಿವಿಲ್ ನ್ಯಾಯಾಧೀಶರ ಮುಂದಿರುವ ಈ ಪ್ರಕರಣವು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅದನ್ನು ವಾರಾಣಸಿ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಲಾಗಿದೆ. ಉತ್ತರ ಪ್ರದೇಶದ ಹಿರಿಯ ಮತ್ತು ಅನುಭವಿ ನ್ಯಾಯಾಂಗ ಅಧಿಕಾರಿಗಳು ಈ ತೀರ್ಪನ್ನು  ನಿರ್ಧರಿಸಬೇಕು, ಫಿರ್ಯಾದುದಾರರು ಹೂಡಿರುವ ದಾವೆಯನ್ನು ಜಿಲ್ಲಾ ನ್ಯಾಯಾಧೀಶರು ಆದ್ಯತೆಯ ಮೇಲೆ ನಿರ್ಧರಿಸಬೇಕು” ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಪಿ ಎಸ್ ನರಸಿಂಹ ಅವರನ್ನು ಒಳಗೊಂಡ ಪೀಠ ಈಗ ಆದೇಶಿಸಿದೆ.

Join Whatsapp