ಯೂಟ್ಯೂಬ್ ನೋಡಿ ಶಸ್ತ್ರಾಸ್ತ್ರ ತಯಾರಿಕೆ: ಇಬ್ಬರ ಬಂಧನ

Prasthutha|

ಸೇಲಂ: ಯೂಟ್ಯೂಬ್ ಚಾನೆಲ್ ವೀಕ್ಷಿಸಿ ಬಂದೂಕು, ಗ್ರೆನೇಡ್ ಹಾಗೂ ಚಾಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದ ಇಬ್ಬರು ಯುವಕರನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಸೇಲಂನ ಎರುಮಾಪಾಳ್ಯಂ ಪ್ರದೇಶದ ನವೀನ್ ಚಕ್ರವರ್ತಿ ಹಾಗೂ ಸಂಜಯ್ ಪ್ರತಾಪ್ ಬಂಧಿತ ಆರೋಪಿಗಳಾಗಿದ್ದಾರೆ.

ಓಮಲೂರು ಬಳಿಯ ಪುಲಿಯಂಪಟ್ಟಿಯಲ್ಲಿ ಓಮಲೂರು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಸೇಲಂನಿಂದ ಬಂದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

- Advertisement -

ಆರೋಪಿಗಳ ಬ್ಯಾಗ್ ಅನ್ನು ಪರಿಶೀಲಿಸಿದಾಗ ಮಾರಕಾಸ್ತ್ರಗಳು, ದೊಡ್ಡ ಪಿಸ್ತೂಲ್, ತಯಾರಿಕ ಹಂತದಲ್ಲಿದ್ದ ದೊಡ್ಡ ಪಿಸ್ತೂಲ್, ಚಾಕು ಸೇರಿದಂತೆ ಇತರ ವಸ್ತುಗಳು ಇದ್ದವು. ತಕ್ಷಣ ಇಬ್ಬರನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.

ಹೆಚ್ಚಿನ ತನಿಖೆಯಿಂದ ಆರೋಪಿಗಳು ಯೂಟ್ಯೂಬ್ ಚಾನೆಲ್ ಗಳನ್ನು ವೀಕ್ಷಿಸಿ ಬಂದೂಕು, ಗ್ರೆನೇಡ್ ಮತ್ತು ಚಾಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಇಬ್ಬರ ವಿರುದ್ಧ ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಸೇಲಂ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

Join Whatsapp