ಕಾನ್ಪುರ: ಮೋದಿ ರ್‍ಯಾಲಿಗೆ ಜನ ಸೇರಿಸಲು ಸರಕಾರಿ ಇಲಾಖೆಗಳಿಗೆ ಜಿಲ್ಲಾಡಳಿತ ಸೂಚಿಸಿರುವುದಾಗಿ ಉತ್ತರಪ್ರದೇಶದಲ್ಲಿ ವರದಿಯಾಗಿದೆ.
ಮೋದಿಯವರ ರ್‍ಯಾಲಿಗೆ ಸುಮಾರು 75,000 ಜನರನ್ನು ಕರೆತರುವಂತೆ ಸರಕಾರಿ ಇಲಾಖೆಗಳಿಗೆ ಜಿಲ್ಲಾಡಳಿತ ಅಧಿಕೃತ ಸೂಚನೆ ನೀಡಿರುವುದಾಗಿ ಸುದ್ದಿ ಸಂಸ್ಥೆ ಡೆಕನ್ ಹೆರಾಲ್ಡ್ ವರದಿ ಮಾಡಿದೆ.
ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಇಂದು ಪ್ರಧಾನಿ ಮೋದಿ, ಮೆಟ್ರೋ ರೈಲು ಯೋಜನೆಯ ಉದ್ಘಾಟನೆ ನಡೆಸಿದ್ದು, ನಂತರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ರ್‍ಯಾಲಿಗೆ ಜನ ಸೇರಿಸುವಂತೆ ಸರಕಾರಿ ಇಲಾಖೆಗಳಿಗೆ ಕಾನ್ಪುರ ಜಿಲ್ಲಾಡಳಿತ ಅಧಿಕೃತ ಸೂಚನೆ ನೀಡಿದೆ.
ಈ ಕುರಿತು ವೈದ್ಯಕೀಯ ಮತ್ತು ಆರೋಗ್ಯ, ಆಹಾರ ಮತ್ತು ನಾಗರಿಕ ಸರಬರಾಜು, ತೋಟಗಾರಿಕೆ, ಸಮಾಜ ಕಲ್ಯಾಣ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ ಮತ್ತು ಇತರ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಿದ ಕಾನ್ಪುರ ಜಿಲ್ಲಾಡಳಿತ, ರ್‍ಯಾಲಿಯಲ್ಲಿ ಭಾಗವಹಿಸಲು ಕೇಂದ್ರ ಯೋಜನೆಗಳ ಸುಮಾರು 75,000 ಫಲಾನುಭವಿಗಳನ್ನು ಕರೆತರುವಂತೆ ಸೂಚನೆ ನಿಡಿದೆ
ಅಂಗನವಾಡಿ, ಆಶಾ ಹಾಗೂ ಪಂಚಾಯತ್ ಕಾರ್ಯಕರ್ತೆಯರು ಕಡ್ಡಾಯವಾಗಿ ಹಾಜರಿರುವಂತೆ ಪ್ರಕಟಣೆಯಲ್ಲಿ ಸೂಚಿಸಲಾಗಿದ್ದು, ರ್‍ಯಾಲಿಗೆ ಬರಲಿರುವ 75,000 ಜನರಿಗೂ ಸಾರಿಗೆ, ಆಹಾರ ಮತ್ತು ವಸತಿಗೆ ವ್ಯವಸ್ಥೆ ಮಾಡುವಂತೆಯೂ ಹೇಳಲಾಗಿದೆ. ಈ ಜನರನ್ನು ರ್‍ಯಾಲಿ ಸ್ಥಳಕ್ಕೆ ಕರೆದೊಯ್ಯಲು 2,000 ಕ್ಕೂ ಹೆಚ್ಚು ಉತ್ತರಪ್ರದೇಶದ ಸರ್ಕಾರಿ ರಸ್ತೆಗಳು ಮತ್ತು ಖಾಸಗಿ ಬಸ್‌ಗಳನ್ನು ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News