ಕಸದ ರಾಶಿ ಮಧ್ಯೆ ಮೋದಿ ಭಾವಚಿತ್ರವಿಟ್ಟು ಪ್ರತಿಭಟನೆ

Prasthutha|

ಹುಬ್ಬಳ್ಳಿ: ಕಸದ ರಾಶಿ ಮಧ್ಯೆ ಮೋದಿ ಭಾವಚಿತ್ರವಿಟ್ಟು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್​ ಪ್ರತಿಭಟನೆ ನಡೆಸಿದೆ.

- Advertisement -

ಹುಬ್ಬಳ್ಳಿಯಲ್ಲಿ ಒಂದು ಕಡೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.

ಹುಬ್ಬಳ್ಳಿ ಪಾಲಿಕೆಯ ಎದುರು ಕಸ ಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ಕಸ ಮುಕ್ತವನ್ನಾಗಿ ಮಾಡಲು ಬಿಜೆಪಿಯವರಿಗೆ ಆಗಿಲ್ಲ. ಕಳೆದ ‌ಒಂದು ವಾರದಿಂದ ಕಸ ವಿಲೇವಾರಿ ಮಾಡಿಲ್ಲ. ನಗರವನ್ನು ಸ್ವಚ್ಛವಾಗಿಡಲು ಬಿಜೆಪಿ ವಿಫಲವಾಗಿದೆ. ಎಲ್ಲಾ ಪೌರ ಕಾರ್ಮಿಕರನ್ನ ಬಿಜೆಪಿಯವರು ತಮ್ಮ ಕಾರ್ಯಕ್ರಮದ ಸ್ವಚ್ಚತಾ ಕಾರ್ಯಕ್ಕೆ ಬಳಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp