ನಿಜವಾದ ದೇಶಭಕ್ತಿಯಿದ್ದಲ್ಲಿ, ಸಂವಿಧಾನವನ್ನು ವಿರೋಧಿಸಿ ಕಾನೂನು ಕೈಗೆತ್ತಿಕೊಳ್ಳುವ ಎಲ್ಲಾ ಸಂಘಟನೆಗಳನ್ನೂ ನಿಷೇಧ ಮಾಡಿ: ನಳಿನ್ ಗೆ ಖಾದರ್ ತಿರುಗೇಟು

ಮಂಗಳೂರು: ಪಿಎಫ್.ಐ.ನಿಷೇಧ ಮಾಡಿ ಎಂದು ಕಣ್ಣೀರು ಹಾಕಿದರು ಎಂಬ ಸಂಸದ ನಳಿನ್ ಹೇಳಿಕೆಗೆ ತೀರುಗೇಟು ನೀಡಿದ ಶಾಸಕ ಯುಟಿ ಖಾದರ್ ನಿಜವಾದ ದೇಶಭಕ್ತಿಯಿದ್ದಲ್ಲಿ, ಸಂವಿಧಾನವನ್ನು ವಿರೋಧಿಸಿ ಕಾನೂನು ಕೈಗೆತ್ತಿಕೊಳ್ಳುವ ಎಲ್ಲಾ ಸಂಘಟನೆಗಳನ್ನೂ ನಿಷೇಧ ಮಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -

ನಳಿನ್ ಕುಮಾರ್ ಕಟೀಲ್ ರವರು ರಾಜಕಾರಣದಲ್ಲಿ ಗಾಳಿಯಲ್ಲಿ ಗುಂಡು ಹೊಡೆದು ವಿಕೃತ ಖುಷಿ ತಗೊಳ್ಳುವ ವಿಚಾರದಲ್ಲಿ ಅತ್ಯಂತ ಹೆಸರುವಾಸಿ. ಸುಳ್ಳು ಹೇಳೋದು, ಆಮೇಲೆ ಸುಳ್ಳಿನ ಮೇಲೆ ರಾಜಕಾರಣ ಮಾಡೋದು. ಇದು ವಿಘ್ನ ಸಂತೋಷಿಗಳ ಲಕ್ಷಣ. ಸುಳ್ಳು ಹೇಳೋದರಲ್ಲಿ ನಳಿನ್ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

ನಳಿನ್ ನ ಮುಂದೆ ಕಣ್ಣೀರು ಹಾಕುವ ಅವಶ್ಯಕತೆ ನನಗಿಲ್ಲ, ಅಂಥಹ ಅವಶ್ಯಕತೆ ಇನ್ನು ಮುಂದಕ್ಕೂ ಕೂಡಾ ಬರುವುದೂ ಇಲ್ಲ. ತಾನು ಮಾಡಿದ ಕೆಲಸವನ್ನು ನಾನೇ ಮಾಡಿದ್ದು ಎಂದು ಹೇಳುವಷ್ಟು ಸಾಮರ್ಥ್ಯ, ಧೈರ್ಯವಿಲ್ಲದವರು ಈ ರೀತಿಯ ಅಪಾದನೆ ಮಾಡುವುದು ಸಹಜ. ನಿಮಗೆ ನಿಜವಾದ ದೇಶಭಕ್ತಿಯಿದ್ದಲ್ಲಿ, ಧರ್ಮದ ಆಧಾರದಲ್ಲಿ ವಿಷ ಬೀಜ ಬಿತ್ತಿ ಸಮಾಜ ಸ್ವಾಸ್ಥ್ಯ ಕೆಡಿಸುವ, ಭಾರತದ ಶ್ರೇಷ್ಠ ಸಂವಿಧಾನವನ್ನು ವಿರೋಧಿಸಿ ಕಾನೂನು ಕೈಗೆತ್ತಿಕೊಳ್ಳುವ ಎಲ್ಲಾ ಸಂಘಟನೆಗಳನ್ನೂ ನಿಷೇಧ ಮಾಡಿಯೆಂದು ಕಟೀಲು ರವರಿಗೆ ಯು.ಟಿ.ಖಾದರ್ ಸಲಹೆ ನೀಡಿದರು.