ಸಮುದಾಯವೊಂದು ಅಭದ್ರತೆಯ ಪರಿಸ್ಥಿತಿಯಲ್ಲಿ ಯಾಕಿದೆ?

Prasthutha|

- Advertisement -

✍️ನವೀನ್ ಸೂರಿಂಜೆ

ನಕ್ಸಲರು ಅಷ್ಟು ಜನರನ್ನು ಕೊಂದರು, ಇಷ್ಟು ಪೊಲೀಸರ ಮೇಲೆ ಗುಂಡು ಹಾರಿಸಿದರು ಎಂದೆಲ್ಲಾ ಇರುವ ಪೊಲೀಸ್ ವರದಿಯನ್ನು ನೋಡಿ ‘ಹೌದು. ಹಿಂಸೆ ತಪ್ಪು. ಆದರೆ ನಕ್ಸಲರ ಬೇಡಿಕೆ ಏನು ? ಯಾರ ಪರವಾಗಿ ಅದನ್ನು ಮಾಡಿದರು ಎಂದು ನೋಡಬೇಕಲ್ವಾ ? ನಕ್ಸಲರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ ಆ ಬಳಿಕ ಅವರ ದಾರಿಯನ್ನು ವಿರೋಧಿಸೋಣಾ’ ಅಂತೀವಿ.

- Advertisement -

ಯಾವುದೇ ಸಮುದಾಯದ ಸಂಘಟನೆಯನ್ನು ಬ್ಯಾನ್ ಮಾಡುವುದಕ್ಕೂ ಮೊದಲು, ವಿರೋಧಿಸುವುದಕ್ಕೂ ಮೊದಲು ಅದು ಎತ್ತಿರುವ ಪ್ರಶ್ನೆಗಳಿಗೆ ಸರ್ಕಾರವಾಗಲೀ, ಜನಸಮುದಾಯವಾಗಲೀ ಉತ್ತರ ಕೊಡಬೇಕಾಗುತ್ತದೆ.

ಸಮುದಾಯವೊಂದು ಅಭದ್ರತೆಯ ಪರಿಸ್ಥಿತಿಯಲ್ಲಿ ಯಾಕಿದೆ ? ಆ ಅಭದ್ರತೆಗೆ ಕಾರಣ ಯಾರು ? ಆಹಾರದಿಂದ ವಸ್ತ್ರದವರೆಗೆ ಪ್ರತಿಯೊಂದರಲ್ಲೂ ಸಮುದಾಯವೊಂದನ್ನು ಯಾಕೆ ಟಾರ್ಗೆಟ್ ಮಾಡಲಾಯಿತು ? ಸರ್ಕಾರಕ್ಕಾಗಲೀ, ಯಾವ ಸಮುದಾಯಕ್ಕಾಗಲೀ ಯಾವ ತೊಂದರೆಯೂ ಅಲ್ಲದ ಆಹಾರ ಪದ್ದತಿ, ವಸ್ತ್ರ ಪದ್ದತಿಗೆ ಅಡ್ಡಿ ಯಾಕೆ ಮಾಡಲಾಯಿತು ? ರಾಜಕೀಯವಾಗಿ, ಸಾಮಾಜಿಕವಾಗಿ ಸಮುದಾಯವನ್ನು ಅನುಮಾನಿತ ಮತ್ತು ಅವಮಾನಿತರನ್ನಾಗಿ ಮಾಡಿದ್ದು ಯಾಕೆ ? ವ್ಯಾಪಾರ ವಹಿವಾಟುಗಳನ್ನು ಯಾಕೆ ಬಹಿಷ್ಕರಿಸಲಾಯಿತು ? ದನ ಸಾಗಾಟ ಮಾಡಿದರೆಂದು ಆ ಸಮುದಾಯವನ್ನು ಬೀದಿ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದಾಗ ಅಂತಹ ಸಂಘಟನೆಗಳನ್ನು ಯಾಕೆ ಬ್ಯಾನ್ ಮಾಡಲಿಲ್ಲ ? ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಭಯ ಮತ್ತು ಹಸಿವಿನಿಂದ ಸಮುದಾಯ ಯಾಕೆ ಮುಕ್ತವಾಗಿಲ್ಲ ? ಈ ಪ್ರಶ್ನೆಗಳಿಗೆ ಸಂಘಟನೆಯನ್ನು ಬ್ಯಾನ್ ಮಾಡುವ ಸರ್ಕಾರ ಉತ್ತರ ನೀಡಬೇಕಲ್ವಾ ? ಹೋಗಲಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ‘ಬ್ಯಾನ್’ ಎನ್ನುವ ಬಹಿಷ್ಕಾರ ಪದ್ದತಿಯೇ ತಪ್ಪಾದರೂ ಏಕಪಕ್ಷೀಯ ಬ್ಯಾನ್ ಅನ್ನು ಸ್ವಾಗತಿಸುವ ಜಾತ್ಯಾತೀತರಾದರೂ ಉತ್ತರ ಹೇಳಬೇಕಲ್ವ ?
ಸಮುದಾಯದ ಹಸಿವು, ಭಯ, ಅವಮಾನ, ಅನುಮಾನದ ಪ್ರಶ್ನೆಗಳಿಗೆ ‘ಆ ಸಂಘಟನೆ ಉತ್ತರ ಅಲ್ಲ’ ಎನ್ನುವವರಾದರೂ ಪ್ರಶ್ನೆಗಳಿಗೆ ಉತ್ತರ ನೀಡಬೇಕಲ್ವಾ ?

Join Whatsapp