ಆರೆಸ್ಸೆಸ್ಸನ್ನು ವಿಮರ್ಶಿಸಿದ್ದಕ್ಕಾಗಿ ಬಂಧನ| ಕೇರಳದ ಉಸ್ಮಾನ್ ಹಮೀದ್ ಕಟ್ಟಪ್ಪನಗೆ ಜಾಮೀನು

Prasthutha|

ಇಡುಕ್ಕಿ: ಆರೆಸ್ಸೆಸ್ ಮತ್ತು ಪೊಲೀಸರನ್ನು ವಿಮರ್ಶಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಕೇರಳದ SDPI ಕಾರ್ಯಕರ್ತ ಉಸ್ಮಾನ್ ಹಮೀದ್ ಕಟ್ಟಪ್ಪನ ಅವರಿಗೆ ಜಾಮೀನು ಲಭಿಸಿದೆ.

- Advertisement -

ಕಟ್ಟಪ್ಪನ ಕೊಲ್ಲಂಪರಂಬಿಲ್‌ನ ಉಸ್ಮಾನ್ ಹಮೀದ್(41) ಅವರನ್ನು ಜನವರಿ 6 ರಂದು ಕೇರಳ ಪೊಲೀಸರು ಜಾಮೀನು ರಹಿತ ಸೆಕ್ಷನ್ ಹಾಕಿ ಬಂಧಿಸಿದ್ದರು.

RSS ರಾಜ್ಯಾದ್ಯಂತ ಗಲಭೆಗಳನ್ನು ಪ್ರಚೋದಿಸುತ್ತಿದೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸುತ್ತಾ ಪೊಲೀಸರು ಮತ್ತು ಆರೆಸ್ಸೆಸ್ಸನ್ನು ಟೀಕಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ಉಸ್ಮಾನ್ ಅವರನ್ನು ಬಂಧಿಸಲಾಗಿತ್ತು.

- Advertisement -

ಕೇರಳ ಪೊಲೀಸರ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಉಸ್ಮಾನ್ ಹಮೀದ್ ಬಂಧನದ ನಂತರ ಆರೆಸ್ಸೆಸ್ಸನ್ನು ವಿಮರ್ಶಿಸಿದ್ದ ಸುಮಾರು 90 ಜನರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದರು.

Join Whatsapp