ಚಿರತೆ ಸೆರೆಹಿಡಿಯಲು ಸೇನೆಯಲ್ಲಿ ಬಳಸುವ ಅತ್ಯಾಧುನಿಕ ಥರ್ಮಲ್ ಡ್ರೋನ್ ಕ್ಯಾಮರಾ ಬಳಕೆ

Prasthutha|

- Advertisement -

ಮೈಸೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವನ್ಯಜೀವಿ ಸೆರೆ ಹಿಡಿಯಲು ಗಡಿ ರಕ್ಷಣೆ ಹಾಗೂ ಸೇನಾ ಕಾರ್ಯಾಚರಣೆಯಲ್ಲಿ ಬಳಸುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಥರ್ಮಲ್ ಡ್ರೋನ್ ಕ್ಯಾಮರಾವನ್ನು ಅರಣ್ಯ ಇಲಾಖೆ ಬಳಕೆ ಮಾಡುತ್ತಿದೆ.

ಎರಡು ವಾರಗಳಿಂದ ಚಳ್ಳೆಹಣ್ಣು ತಿನ್ನಿಸುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಪಣತೊಟ್ಟಿರುವ ತಿ.ನರಸೀಪುರದ ಅಧಿಕಾರಿಗಳು, ಈ ಕ್ಯಾಮರಾದ ಮೂಲಕ ಅದು ಅಡಗಿರುವ ಪ್ರದೇಶವನ್ನು ಗುರುತಿಸಿದ್ದಾರೆ.

- Advertisement -

ಆದರೆ ಚಿರತೆ ಸೆರೆಗೆ ಆಳೆತ್ತರ ಬೆಳೆದಿರುವ ಕಬ್ಬಿನ ಗದ್ದೆಗಳೇ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಥರ್ಮಲ್ ಡ್ರೋನ್ ಕೆಮರಾ ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಗಲು, ರಾತ್ರಿ ವೇಳೆ ಯಾವುದೇ ಚಲನವಲನವನ್ನು ಸ್ಪಷ್ಟವಾಗಿ ಗುರುತಿಸಲ್ಪಡುವ ಹಾಗೂ ಎಲ್ಲ ರೀತಿಯ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕ್ಯಾಮರಾ ಇದು. ಆದರೆ ವನ್ಯಜೀವಿ ಸೆರೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಥರ್ಮಲ್ ಡ್ರೋನ್ ಬಳಕೆ ಮಾಡುತ್ತಿರುವುದು ಇದೇ ಮೊದಲು ಮತ್ತು ವಿಶೇಷವಾಗಿದೆ.

ಐವರು ನುರಿತ ತಜ್ಞರ ತಂಡ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದು, ಚಿರತೆ ಅಡಗಿ ಕುಳಿತಿರುವ ಸ್ಥಳದ ಬಗ್ಗೆ ನಿಖರ ಮಾಹಿತಿ ನೀಡಿದೆ

Join Whatsapp