ಮನುಷ್ಯರು 6 ಅಡಿ ಅಂತರದಲ್ಲಿದ್ದರೂ ಸೋಂಕು ಹರಡಬಲ್ಲದು : ತಜ್ಞರ ಎಚ್ಚರಿಕೆ!

Prasthutha|

ವಾಷಿಂಗ್ಟನ್‌: ಮನುಷ್ಯರ ನಡುವೆ 6 ಅಡಿಯಷ್ಟು ಅಂತರವಿದ್ದರೂ ಕೊರೋನಾ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಲ್ಲದು. ಅದು ಗಾಳಿಯಿಂದ ಹರಡುವ ವೈರಾಣುವಾಗಿದೆ ಎಂದು ಅಮೆರಿಕ ಆರೋಗ್ಯ ಕ್ಷೇತ್ರದ ಅತಿ ದೊಡ್ಡ ಸರ್ಕಾರಿ ಸಂಸ್ಥೆಯಾದ ‘ರೋಗ ನಿಯಂತ್ರಣ ಹಾಗೂ ನಿವಾರಣಾ ಕೇಂದ್ರ’ (USDCP) ಎಚ್ಚರಿಕೆ ನೀಡಿದೆ.

- Advertisement -

ಮೊದಲು ಮೂಗಿನಲ್ಲಿ ತೂರಿಕೊಂಡು ಬಾಯಿ – ಗಂಟಲು ನಡುವಿನ ಕಿರುನಾಲಗೆ ಹಾಗೂ ಅದರ ಮೇಲ್ಭಾಗದಲ್ಲಿ ಉಳಿದುಕೊಂಡು ಆನಂತರ ಶ್ವಾಸಕೋಶದೊಳಗೆ ಇಳಿಯುತ್ತದೆ. ಮನುಷ್ಯರ ನಡುವಿನ ಆರು ಅಡಿಗಳ ಅಂತರ ಯಾವ ಪ್ರಯೋಜನಕ್ಕೂ ಬರುವುದಿಲ್ಲ. 6 ಅಡಿ ಅಂತರವಿದ್ದರೂ ಕೊರೊನಾ ವೈರಾಣುಗಳು ತ್ವರಿತವಾಗಿಯೇ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಲ್ಲವು ಎಂದು USDCP ತಿಳಿಸಿದೆ. ಅಲ್ಲದೆ, ಈ ವೈರಾಣುಗಳಿಗೆ ಗಾಳಿಯಲ್ಲಿ ನಿಮಿಷಗಳಿಂದ ಗಂಟೆಗಟ್ಟಲೆ ಹಾರಾಡುವ ಸಾಮಾರ್ಥ್ಯವಿದೆ ಎಂದು ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.

Join Whatsapp