ಉಕ್ರೇನ್’ಗೆ ಆಹಾರ, ಹಣ, ಆಯುಧಗಳ ನೆರವು: ಜೋ ಬೈಡೆನ್

Prasthutha|

ವಾಷಿಂಗ್ಟನ್: 20ನೇ ದಿನಕ್ಕೆ ಕಾಲಿಟ್ಟಿರುವ ರಷ್ಯಾ- ಉಕ್ರೇನ್ ಸಂಘರ್ಷ ಮಧ್ಯೆ ಯುದ್ಧಪೀಡಿತ ಉಕ್ರೇನ್’ಗೆ ಆಯುಧ, ಆಹಾರ, ಹಣದ ನೆರವನ್ನು ಒದಗಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.

- Advertisement -

ಉಕ್ರೇನ್ ನ ಮೇಲೆ ರಷ್ಯಾದ ದಾಳಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ವಿರೋಧವನ್ನು ವ್ಯಕ್ತಪಡಿಸಿವೆ.

ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಬೈಡೆನ್, ಉಕ್ರೇನ್ ಜನರು ಯುದ್ಧದಿಂದಾಗಿ ಹಾನಿಗೊಳಗಾದ ಪ್ರದೇಶಗಳನ್ನು ತೊರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂತ್ರಸ್ತರಿಗೆ ನೆರವಾಲಗು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದ್ದಾರೆ

- Advertisement -

ರಷ್ಯಾವನ್ನು ಶಕ್ತವಾಗಿ ಎದುರಿಸುವ ಸಲುವಾಗಿ ಉಕ್ರೇನ್’ನ ಬಳಿಯಲ್ಲಿ ಸಾಕಷ್ಟು ಶಸ್ತ್ರಾಸ್ತ್ರಗಳಿವೆಯೇ ಎಂದು ಖಚಿತ ಪಡಿಸಿಕೊಳ್ಳಲಿದ್ದೇನೆ. ಸಂತ್ರಸ್ತ ಉಕ್ರೇನ್ ನಾಗರಿಕರ ಪ್ರಾಣವನ್ನು ಕಾಪಾಡಲು ಹಣ ಮತ್ತು ಆಹಾರನ್ನು ಕಳಿಸಲಿದ್ದು, ಉಕ್ರೇನ್ ನಿರಾಶ್ರಿತರನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದು ಟ್ವೀಟ್ನಸಲ್ಲಿ ತಿಳಿಸಿದ್ದಾರೆ

ಈ ಮಧ್ಯೆ ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿರುವ ರಷ್ಯಾವು, ಡ್ರೋನ್, ಶಸ್ತ್ರಾಸ್ತ ಸೇರಿದಂತೆ ಸೈನಿಕ ನೆರವು ನೀಡುವಂತೆ ಚೀನಾದ ಬಳಿ ಮನವಿ ಮಾಡಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp