ಅಮೆರಿಕ ಅಧ್ಯಕ್ಷೀಯ ಚುನಾವಣೆ | ಜೋ ಬೈಡನ್ ಗೆ 306 ಮತ, ಟ್ರಂಪ್ ಗೆ 232 ಮತ

Prasthutha|

ವಾಷಿಂಗ್ಟನ್ : ಅಮೆರಿಕದ ನೂತನ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್ ಅವರೇ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಜಾರ್ಜಿಯಾದಲ್ಲಿ ಬೈಡನ್ ಗೆಲುವು ಖಚಿತಗೊಂಡಿದ್ದು, ಉತ್ತರ ಕರೊಲಿನಾದಲ್ಲಿ ಟ್ರಂಪ್ ವಿಜಯ ಸಾಧಿಸಲಿದ್ದಾರೆ.

ಈ ಎರಡು ಅಂತಿಮ ರಾಜ್ಯಗಳ ಫಲಿತಾಂಶಗಳ ಬಳಿಕ ಬೈಡನ್ 306 ಎಲೆಕ್ಟ್ರಲ್ ಕಾಲೇಜ್ ಮತಗಳನ್ನು ಮತ್ತು ಟ್ರಂಪ್ 232 ಮತಗಳನ್ನು ಪಡೆದಿದ್ದಾರೆ ಎಂದು ಹಲವು ಸುದ್ದಿ ವಾಹಿನಿಗಳು ವರದಿ ಮಾಡಿವೆ.

- Advertisement -

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುಮತ ಸಾಧಿಸಲು 270 ಮತಗಳು ಬೇಕಾಗಿದ್ದು, ಜೋ ಬೈಡನ್ ಈ ಅಂತರವನ್ನು ದಾಟಿ ಪೂರ್ಣ ಬಹುಮತವನ್ನು ಸಾಧಿಸಿದ್ದಾರೆ. ಆದರೆ, ಟ್ರಂಪ್ ಈ ಫಲಿತಾಂಶವನ್ನು ನಿರಾಕರಿಸಿರುವುದರಿಂದ, ಅಂತಿಮವಾಗಿ ಅಧಿಕೃತ ಫಲಿತಾಂಶ ಹೊರಬೀಳುವವರೆಗೆ ಕಾಯಬೇಕಾಗಿದೆ.

ಬೈಡನ್ ಗೆಲುವಿನ ಸೂಚನೆಯ ಬಳಿಕ, ಮೊದಲ ಬಾರಿ ಬಹಿರಂಗ ಪತ್ರಿಕಾಗೋಷ್ಟಿ ನಡೆಸಿರುವ ಟ್ರಂಪ್, ಹೊಸ ಆಡಳಿತ ಬರುವ ಬಗ್ಗೆ ಕೊಂಚ ಮುನ್ಸೂಚನೆ ನೀಡಿದ್ದಾರಾದರೂ, ತಮ್ಮ ಸೋಲಿನ ಬಗ್ಗೆ ಖಚಿತವಾಗಿ ಏನೂ ಮಾತನಾಡಿಲ್ಲ.  

- Advertisement -