ವಿದ್ಯಾರ್ಥಿ ಮುಖಂಡ ಅತಿಕುರ್ರಹ್ಮಾನ್’ಗೆ ತುರ್ತು ಚಿಕಿತ್ಸೆ, ಜಾಮೀನು ನೀಡಿ: ಪ್ರಗತಿಪರರು, ಮಾನವಹಕ್ಕು ಹೋರಾಟಗಾರರ ಆಗ್ರಹ

Prasthutha|

ನವದೆಹಲಿ: ಹೃದಯ ಶಸ್ತ್ರಚಿಕಿತ್ಸೆಯ ಬಳಿಕ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ವಿದ್ಯಾರ್ಥಿ ಮುಖಂಡ ಅತಿಕುರ್ರಹ್ಮಾನ್ ಅವರಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಮತ್ತು ಜಾಮೀನನ್ನು ವ್ಯವಸ್ಥೆಗೊಳಿಸುವಂತೆ ಉತ್ತರ ಪ್ರದೇಶದ 35ಕ್ಕೂ ಅಧಿಕ ನಾಗರಿಕರ ಪರ ಸಂಘಟನೆ ಮತ್ತು ಮಾನವಹಕ್ಕು ಸಂಘಟನೆಗಳ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ತಜ್ಞರು, ನಾಗರಿಕ ಹಕ್ಕುಗಳ ಹೋರಾಟಗಾರರು ಮತ್ತು ಜನಪರ ಹೋರಾಟಗಾರರು, ಪತ್ರಕರ್ತರು, ವಕೀಲರು, ಮಾನವಹಕ್ಕು ಕಾರ್ಯಕರ್ತರು, ವಿದ್ಯಾರ್ಥಿ ಮುಖಂಡರು ಮತ್ತು ಲೇಖಕರನ್ನು ಒಳಗೊಂಡಂತೆ ಹಲವಾರು ಸಂಘಸಂಸ್ಥೆ ಪದಾಧಿಕಾರಿಗಳು ಸಹಿಸಂಗ್ರಹ ಅಭಿಯಾನ ನಡೆಸಿದ್ದು, ಅತಿಕುರ್ರಹ್ಮಾನ್ ವಿರುದ್ಧದ 2020ರ ಹತ್ರಾಸ್ ಆರೋಪದ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಸದ್ಯ ಅತಿಕುರ್ರಹ್ಮಾನ್ ಅವರ ಜಾಮೀನು ಅರ್ಜಿ ನಾಳೆ ವಿಚಾರಣೆಗೆ ಬರಲಿದೆ.

- Advertisement -

ಭೀಮಾ ಕೋರೆಗಾಂವ್ ಪಿತೂರಿ ಪ್ರಕರಣದಲ್ಲಿ ಆರೋಪಿಯಾಗಿರುವ ಫಾದರ್ ಸ್ಟ್ಯಾನ್ ಸ್ವಾಮಿ ಮತ್ತು ನಾಗಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪಾಂಡು ನರೋಟೆ ಅವರು ಚಿಕಿತ್ಸೆಯಲ್ಲಿ ನಿರ್ಲಕ್ಷ ವಹಿಸಿದ ಕಾರಣ ಸಾವನ್ನಪ್ಪಿರುವ ಘಟನೆ ಜೀವಂತವಿರುವಾಗಲೇ ಅತಿಕುರ್ರಹ್ಮಾನ್ ಅವರ ವಿಷಯದಲ್ಲಿನ ನಿರ್ಲಕ್ಷದಿಂದಾಗಿ ಪ್ರಗತಿಪರರಿಂದ ಈ ಹೇಳಿಕೆ ಹೊರಬಿದ್ದಿದೆ.

ಅತಿಕುರ್ರಹ್ಮಾನ್ ಅವರ ಚಿಕಿತ್ಸೆ ನಿರಾಕರಣೆಯು, ಕೈದಿಗಳ ಚಿಕಿತ್ಸೆಯ ವಿಷಯದಲ್ಲಿ ವಿಶ್ವಸಂಸ್ಥೆಯ ಕನಿಷ್ಠ ನಿಯಮಗಳ (ನೆಲ್ಸನ್ ಮಂಡೆಲಾ ನಿರ್ಮಿತ) ಮತ್ತು ಸಂವಿಧಾನದ ಅಡಿಯಲ್ಲಿ ಎಲ್ಲಾ ವ್ಯಕ್ತಿಗಳಿಗೆ ಖಾತರಿಪಡಿಸಿದ ಆರೋಗ್ಯದ ಹಕ್ಕು ಉಲ್ಲಂಘನೆ ಎಂಬುದು ಈ ಮೇಲಿನ ಹೇಳಿಕೆಯು ಗಮನಸೆಳೆದಿದೆ.

ಎಲ್ಲಾ ಬಂಧಿಖಾನೆಗಳು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಆರೈಕೆಗೆ ತಕ್ಷಣ ಸ್ಪಂದಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ವಿಶೇಷ ಚಿಕಿತ್ಸೆ ಅಥವಾ ಅಗತ್ಯ ಶಸ್ತ್ರಚಿಕಿತ್ಸೆಗಾಗಿ ಕೈದಿಗಳನ್ನು ವಿಶೇಷ ಆಸ್ಪತ್ರೆ ಕೇಂದ್ರಗಳಿಗೆ ಅಥವಾ ಸಿವಿಲ್ ಆಸ್ಪತ್ರೆಗಳಿಗೆ ವರ್ಗಾಯಿಸುವುದು ಸಂವಿಧಾನದ ಆಶಯವಾಗಿದೆ ಎಂದು ಗಣ್ಯರು ಉಲ್ಲೇಖಿಸಿದ್ದಾರೆ.

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅತಿಕುರ್ರಹ್ಮಾನ್’ಗೆ ತುರ್ತು ವೈದ್ಯಕೀಯ ಸೇವೆಯನ್ನು ಒದಗಿಸುವಂತೆ ಮಾನವ ಹಕ್ಕುಗಳ ಪರ ಹೋರಾಟಗಾರರು ಒತ್ತಾಯಿಸಿದ್ದಾರೆ. ಅವರ ಆರೋಗ್ಯ ರಕ್ಷಣೆ, ಘನತೆಯ ಮತ್ತು ಜೀವಿಸುವ ಹಕ್ಕುಗಳ ಸಾಂವಿಧಾನಿಕ ಜವಾಬ್ದಾರಿಯನ್ನು ಪೂರೈಸಬೇಕು. ರಾಜ್ಯ ಮತ್ತು ಅದರ ಅಂಗಸಂಸ್ಥೆಗಳು, ಕೈದಿಗಳ ಆರೋಗ್ಯದ ಹಕ್ಕನ್ನು ಖಾತ್ರಿಪಡಿಸಬೇಕು ಮತ್ತು ಭಾರತದ ಸಂವಿಧಾನದ 21ನೇ ವಿಧಿಯ ನಿಬಂಧನೆಗಳನ್ನು ಮತ್ತು ಕೈದಿಗಳಿಗೆ ಸಂಬಂಧಿಸಿದಂತೆ ನೆಲ್ಸನ್ ಮಂಡೇಲಾ ನಿಯಮಗಳಿಗೆ ಅನುಗುಣವಾಗಿರಬೇಕು ಸರ್ಕಾರವನ್ನು ಆಗ್ರಹಿಸಿದೆ.

ಅತಿಕುರ್ರಹ್ಮಾನ್ ಪರವಾಗಿ ಸಹಿ ಸಂಗ್ರಹ ಮಾಡಿದವರಲ್ಲಿ ಪ್ರಮುಖರೆಂದರೆ ವಿ.ಸುರೇಶ್ ( ಪ್ರಧಾನ ಕಾರ್ಯದರ್ಶಿ, ಪಿಯುಸಿಎಲ್), ಅನ್ನಿ ರಾಜಾ (ಪ್ರಧಾನ ಕಾರ್ಯದರ್ಶಿ, ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ ಎನ್ ಎಫ್ ಐಡಬ್ಲ್ಯೂ), ಮೇಧಾ ಪಾಟ್ಕರ್ (ನರ್ಮದಾ ಬಚಾವೋ ಆಂದೋಲನ್ ಮತ್ತು ಎನ್ ಎಪಿಎಂ), ಹರ್ಷ ಮಂದರ್ (ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತರು), Fr. ಫ್ರೇಜರ್ ಮಸ್ಕರೇನ್ಹಸ್, ಎಸ್.ಜೆ.- ಅಕಾಡೆಮಿಕ್ ಅಡ್ಮಿನಿಸ್ಟ್ರೇಟರ್, ಮಿಹಿರ್ ದೇಸಾಯಿ, ಹಿರಿಯ ವಕೀಲ ಮತ್ತು ಪಿಯುಸಿಎಲ್ ಮಹಾರಾಷ್ಟ್ರ, ಹೆನ್ರಿ ಟಿಫಾಗ್ನೆ, ಪೀಪಲ್ಸ್ ವಾಚ್, ತಮಿಳುನಾಡು, ಕವಿತಾ ಕೃಷ್ಣನ್, ಲೇಖಕಿ ಮತ್ತು ಮಾರ್ಕ್ಸ್’ವಾದಿ ಸ್ತ್ರೀವಾದಿ ಕಾರ್ಯಕರ್ತೆ, ಅಪೂರ್ವಾನಂದ್, ಅಂಕಣಕಾರ ಮತ್ತು ಅಕಾಡೆಮಿ ಅಧ್ಯಕ್ಷೆ, ರಾಜಾಪಿಯುಎಲ್ ಅಧ್ಯಕ್ಷೆ, ಕವಿತಾ ಶ್ರೀವ.ಪೂ.ಎಲ್. ರವಿಕಿರಣ್ ಜೈನ್ (ಅಧ್ಯಕ್ಷರು), ಪಿಯುಸಿಎಲ್, ಆಕರ್ ಪಟೇಲ್, ಅಂಕಣಕಾರ, ಬ್ರೀನೆಲ್ಲೆ ಡಿ’ಸೋಜಾ, ಶೈಕ್ಷಣಿಕ ಮತ್ತು ಕಾರ್ಯಕರ್ತ, ಮುಂಬೈ, ಫಾ. ಸೆಡ್ರಿಕ್ ಪ್ರಕಾಶ್, ಲೇಖಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ, ಗುಜರಾತ್, ಮಾಧುರಿ, ಜಾಗೃತ್ ಆದಿವಾಸಿ ದಲಿತ ಸಂಘಟನೆ (JADS) ಮತ್ತು PUCL, ಮಧ್ಯಪ್ರದೇಶ , ನ್ಯಾಷನಲ್ ಅಲೈಯನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ಸ್ (NAPM), ಉತ್ತರ ಪ್ರದೇಶ, ಪ್ರಸಾದ್ ಚಾಕೊ, ಸಮಾಜ ಸೇವಕ, ಗುಜರಾತ್, VS ಕೃಷ್ಣ ಮತ್ತು ಗುಟ್ಟಾ ರೋಹಿತ್, ಮಾನವ ಹಕ್ಕುಗಳ ವೇದಿಕೆ, ಆಂಧ್ರಪ್ರದೇಶ, ಅರವಿಂದ್ ನರೈನ್, ವಕೀಲರು, ಅಧ್ಯಕ್ಷರು, PUCL ಕರ್ನಾಟಕ, ಬೇಲಾ ಭಾಟಿಯಾ, ಮಾನವ ಹಕ್ಕುಗಳ ವಕೀಲ ಮತ್ತು ಬರಹಗಾರರು, ಮೀರಾ ಸಂಘಮಿತ್ರ NAPM ತೆಲಂಗಾಣ ಮತ್ತು ಮೆಹಾ ಖಂಡೂರಿ, ಮಾನವ ಹಕ್ಕುಗಳ ಹೋರಾಟಗಾರರು, ಲಾರಾ ಜೆಸಾನಿ, ವಕೀಲ ಮತ್ತು PUCL ಮಹಾರಾಷ್ಟ್ರ, ಜಾನ್ ಡಿ’ಸೋಜಾ, ಚಲನಚಿತ್ರ ನಿರ್ಮಾಪಕರು, ಅನುರಾಧ, ಸಹೇಲಿ, ದೆಹಲಿ ಮತ್ತು ಕ್ಲಿಫ್ಟನ್ ಡಿ’ ರೊಜಾರಿಯೊ, ಅಖಿಲ ಭಾರತ ನ್ಯಾಯವಾದಿಗಳ ಸಂಘ (AILAJ) ಒಳಗೊಂಡಿದ್ದಾರೆ.

Join Whatsapp