ಪತ್ರಕರ್ತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಮಾಫಿಯಾ ಗ್ಯಾಂಗ್

Prasthutha|

ಗುವಾಹತಿ : ಅಸ್ಸಾಂನ ದಿನ ಪತ್ರಿಕೆಯೊಂದರ ಕ್ರೈಂ ವರದಿಗಾರನನ್ನು ಗುಂಪೊಂದು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ವರದಿಯಾಗಿದೆ. ಗುವಾಹತಿಯಿಂದ 45 ಕಿ.ಮೀ. ದೂರದಲ್ಲಿರುವ ಮಿರ್ಝಾದಲ್ಲಿ ಈ ಘಟನೆ ನಡೆದಿದೆ.

ಜೂಜುಕೋರರು ಮತ್ತು ಭೂ ಮಾಫಿಯಾದ ಗುಂಪೊಂದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಮಿಲನ್ ಮಹಾಂತ ಎಂಬವರ ಮೇಲೆ ಈ ಗುಂಪು ಹಲ್ಲೆ ನಡೆಸಿದೆ. ತಮ್ಮ ವಿರುದ್ಧ ವರದಿ ಮಾಡಿದುದಕ್ಕೆ ಈ ದಾಳಿ ಮಾಡಿದೆ ಎನ್ನಲಾಗಿದೆ.

- Advertisement -

20 ವರ್ಷಗಳಿಂದ ‘ಅಸೋಮಿಯಾ ಪ್ರದಿತಿನ್’ ಪತ್ರಿಕೆಯಲ್ಲಿ ಸತತ ವರದಿ ಮಾಡುತ್ತಿದ್ದ ಮಿಲನ್ ಗೆ ಈ ದಾಳಿ ಆಘಾತವನ್ನುಂಟು ಮಾಡಿದೆ.

“ಅವರು ನನ್ನನ್ನು ಕೊಲ್ಲಲು ಬಯಸಿದ್ದರು ಅನಿಸುತ್ತಿದೆ. ನಾನು ಅವರ ವಿರುದ್ಧ ಸರಣಿ ವರದಿ ಮಾಡಿದ್ದೆ. ನನ್ನನ್ನು ರಕ್ಷಿಸಲು ಬಂದವರ ಮೇಲೂ ಅವರು ದಾಳಿ ನಡೆಸಲು ಯತ್ನಿಸಿದರು. ಘಟನೆ ನಡೆದು ಮೂರು ದಿನಗಳಾಗಿವೆ ಆದರೂ, ಪೊಲೀಸರು ಈ ಬಗ್ಗೆ ವಿವರ ಕೇಳಿಲ್ಲ’’ ಎಂದು ಮಿಲನ್ ತಿಳಿಸಿದ್ದಾರೆ.

- Advertisement -