ಆನ್’ಲೈನ್ ತರಗತಿ ನಡೆಯುತ್ತಿರುವಾಗಲೇ ಶಿಕ್ಷಕನ ಕತ್ತು ಹಿಸುಕಿ ಹತ್ಯೆ

Prasthutha|

ಉತ್ತರಪ್ರದೇಶ : ಆನ್ ಲೈನ್ ತರಗತಿ ನಡೆಸುತ್ತಿರುವ ವೇಳೆ ದುಷ್ಕರ್ಮಿಗಳ ತಂಡವೊಂದು ಶಿಕ್ಷಕರೊಬ್ಬರನ್ನು ಕತ್ತು ಹಿಸುಕಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ.

- Advertisement -

ಹತ್ಯೆಯಾದ ಶಿಕ್ಷಕನನ್ನು ಕೃಷ್ಣ ಕುಮಾರ್ ಯಾದವ್(35) ಎಂದು ಗುರುತಿಸಲಾಗಿದೆ. ಅವರು ತನ್ನ ಮನೆಯಲ್ಲಿ ವಿದ್ಯಾರ್ಥಿಗಳಿಗೆ ಆನ್’ಲೈನ್ ಮೂಲಕ ತರಗತಿ ನಡೆಸುತ್ತಿದ್ದರು. ಈ ವೇಳೆ ದುಷ್ಕರ್ಮಿಗಳ ತಂಡವೊಂದು ಕತ್ತು ಹಿಸುಕಿ ಅವರನ್ನು ಕೊಲೆಗೈದಿದೆ.  

ಅಂಬೇಡ್ಕರ್‌ ನಗರ ಜಿಲ್ಲೆಯವರಾದ ಯಾದವ್ ಅವರು ಉತ್ತರ ಪ್ರದೇಶದ ಗೊಂಡಾದ ಫೋರ್ಬ್ಸ್‌ಗಂಜ್ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಕಳೆದ ಶನಿವಾರ ಸಂಜೆ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಬಳಸಿ ವಿಡಿಯೋ ಕಾಲ್ ಮೂಲಕ ಆನ್’ಲೈನ್ ಕ್ಲಾಸ್ ನಡೆಸುತ್ತಿದ್ದರು. ಈ ವೇಳೆ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ದುಷ್ಕರ್ಮಿಗಳು ಶಿಕ್ಷಕನ ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

- Advertisement -

ಘಟನೆಯ ಎಲ್ಲಾ ದೃಶ್ಯಾವಳಿಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು, ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ.

ಘಟನೆಗೆ ಸಂಬಂಧಿಸಿ ಪೊಲೀಸರು ಸಂದೀಪ್ ಯಾದವ್ ಮತ್ತು ಜವಾಹಿರ್ ಮಿಶ್ರಾ ಅಲಿಯಾಸ್ ಜಗ್ಗಾ ಎಂಬ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. “ತಾನು ಶಿಕ್ಷಕನ ತಂಗಿಯನ್ನು ಪ್ರೀತಿಸುತ್ತಿದ್ದೇನೆ. ಈ ವಿಚಾರದಲ್ಲಿ ಶಿಕ್ಷಕ ನನ್ನನ್ನು ನಿಂದಿಸಿದ್ದರು. ಇದರಿಂದ ಕೋಪಗೊಂಡು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ” ಎಂದು ವಿಚಾರಣೆ ವೇಳೆ ಆರೋಪಿಗಳಲ್ಲಿ ಒಬ್ಬಾತ ಹೇಳಿಕೊಂಡಿದ್ದಾನೆ.

Join Whatsapp