ಉತ್ತರಪ್ರದೇಶ: ತರಗತಿಯಲ್ಲಿ ಮೊಬೈಲ್ ಬಳಸದಂತೆ ತಾಕೀತು ಮಾಡಿದ ಅಧ್ಯಾಪಕನಿಗೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳು

Prasthutha|

ಅಧ್ಯಾಪಕ ವಾಸಿಕ್ ಅಲಿ ಮುಖಕ್ಕೆ ಬಟ್ಟೆ ಸುತ್ತಿ ಹಲ್ಲೆ ನಡೆಸಿದ ತಂಡ

- Advertisement -

ಗೋರಖ್ ಪುರ: ಉತ್ತರಪ್ರದೇಶದ ಗೋರಖ್ ಪುರದ ಸರ್ಕಾರಿ ಶಾಲೆಯಲ್ಲಿ ಮೊಬೈಲ್ ಬಳಸುವುದನ್ನು ಪ್ರಶ್ನಿಸಿದ ಅಧ್ಯಾಪಕನ ಮೇಲೆ 9 ನೇ ತರಗತಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಲ್ಲೆಗೊಳಗಾದವರನ್ನು ಕಂಪ್ಯೂಟರ್ ವಿಭಾಗದ ಶಿಕ್ಷಕರಾದ ಸಯ್ಯದ್ ವಾಸಿಕ್ ಅಲಿ ಎಂದು ಗುರುತಿಸಲಾಗಿದೆ. ಗೋರಖ್ ಪುರ ಸರ್ಕಾರಿ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿಗಳ ತಂಡವೊಂದು ಅಧ್ಯಾಪಕರಾದ ವಾಸಿಕ್ ಅಲಿ ಅವರ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ವಾಸಿಕ್ ನೀಡಿದ ದೂರಿನನ್ವಯ ಓರ್ವ ಪರಿಚಿತ ವಿದ್ಯಾರ್ಥಿ ಸೇರಿದಂತೆ ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪೊಲೀಸರು ಓರ್ವ ವಿದ್ಯಾರ್ಥಿಯನ್ನು ಬಂಧಿಸಿ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಆತನನ್ನು ಶಾಲೆಯಿಂದ ವಜಾಗೊಳಿಸಲಾಗಿದೆ.

ಈ ಮಧ್ಯೆ ಬಂಧಿತ ವಿದ್ಯಾರ್ಥಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾತ್ರವಲ್ಲ ಇತರ ಇಬ್ಬರನ್ನು ಗುರುತಿಸಿ ಬಂಧಿಸುವ ಕುರಿತು ತನಿಖೆ ಕೇಂದ್ರೀಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp