ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ನವೆಂಬರ್ 26 ರ ಗಡುವು ನೀಡಿದ ರಾಕೇಶ್ ಟಿಕಾಯತ್

Prasthutha|

ನವದೆಹಲಿ: ನವೆಂಬರ್ 26 ರೊಳಗೆ ವಿವಾದಾತ್ಮಕ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಕೇಂದ್ರಕ್ಕೆ ಅಂತಿಮ ಗಡುವು ವಿಧಿಸುವುದಾಗಿ ರೈತ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

- Advertisement -

ಇದರ ಹೊರತಾಗಿ ಸರ್ಕಾರ ತನ್ನ ಧೋರಣೆಯನ್ನು ಮುಂದುವರಿಸಿದರೆ, ದೆಹಲಿ ಗಡಿಯಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಅವರು ಎಚ್ಚರಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ ಒಂದು ವರ್ಷಗಳಿಂದ ನಡೆಸುತ್ತಿರುವ ಆಂದೋಲಕನ ಹಿನ್ನೆಲೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥನ ಈ ಹೇಳಿಕೆ ಹೊರಬಿದ್ದಿದೆ.

- Advertisement -

“ಕೇಂದ್ರ ಸರ್ಕಾರಕ್ಕೆ ನವೆಂಬರ್ 26 ರ ವರೆಗೆ ಸಮಯವಿದೆ, 27 ರಿಂದ ರೈತರು ಹಳ್ಳಿಗಳಿಂದ ಟ್ರ್ಯಾಕ್ಟರ್ ಗಳ ಮೂಲಕ ದೆಹಲಿಯ ಸುತ್ತಮುತ್ತಲಿನ ಸ್ಥಳಗಳಿಂದ ಗಡಿಯನ್ನು ತಲುಪುತ್ತಾರೆ. ಪ್ರತಿಭಟನಾ ಸ್ಥಳವನ್ನು ಭದ್ರಪಡಿಸುವ ಮೂಲಕ ಹೋರಾಟ ಮುಂದುವರಿಸಲಿದ್ದಾರೆ” ಎಂದು ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಎರಡು ದಿನಗಳ ಅಂತರದಲ್ಲಿ 2 ನೇ ಬಾರಿಗೆ ರಾಕೇಶ್ ಟಿಕಾಯತ್ ಕೇಂದ್ರಕ್ಕೆ ತನ್ನ ಎಚ್ಚರಿಕೆಯನ್ನು ರವಾನಿಸಿದ್ದಾರೆ. ದೆಹಲಿ ಗಡಿಯಿಂದ ರೈತರನ್ನು ಹೊರದಬ್ಬಲು ಪ್ರಯತ್ನಿಸಿದರೆ ಸರ್ಕಾರ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಭಾನುವಾರ ಎಚ್ಚರಿಸಿದ್ದರು.

ಕೇಂದ್ರ ಮತ್ತು ರೈತರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಅತಂತ್ರ ಸ್ಥಿತಿ ಮುಂದುವರಿದಿದೆ.

Join Whatsapp