ಉತ್ತರ ಪ್ರದೇಶ: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ದಲಿತ ಯುವತಿ ಮೃತ್ಯು

Prasthutha|

ಹೊಸದಿಲ್ಲಿ: ನಾಲ್ವರು ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 19ರ ಹರೆಯದ ದಲಿತ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಯುವತಿ ಸೆ.14ರಂದು ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದು, ಘಟನೆಯ ಸುಮಾರು ಎರಡು ವಾರಗಳ ಬಳಿಕ ಮಹಿಳೆ ಸಾವನ್ನಪ್ಪಿದ್ದಾಳೆ.

ಆಕೆಯನ್ನು ದಿಲ್ಲಿ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಹಿಂದೆ ಯುವತಿಯನ್ನು ಅಲಿಘಡ್ ನ ಜೆ.ಎನ್.ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿತ್ತು.

- Advertisement -

ಸಾಮೂಹಿಕ ಅತ್ಯಾಚಾರದ ಎಲ್ಲಾ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸಂದೀಪ್, ರಾಮು, ಲವಕುಶ್ ಮತ್ತು ರವಿ ಎಂದು ಯುವತಿ ಗುರುತಿಸಿದ್ದಳು.

ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿರುವುದಲ್ಲದೆ ಕತ್ತು ಹಿಸುಕಲಾಗಿತ್ತು. ಆಕೆಯ ನಾಲಗೆ ಗಂಭೀರವಾಗಿ ಮುರಿತಕ್ಕೊಳಗಾಗಿರುವುದು ಕತ್ತು ಹಿಸುಕಲು ಪ್ರಯತ್ನ ನಡೆದಿರುವುದನ್ನು ಸೂಚಿಸುತ್ತದೆ ಎಂದು ಹತ್ರಾಸ್ ನ ಎಸ್.ಪಿ ವಿಕ್ರಾಂತ್ ವೀರ್ ಹೇಳಿದ್ದಾರೆ.

- Advertisement -