ಬಿಹಾರ ಚುನಾವಣೆ: ಮಹಾಮೈತ್ರಿ ರಚಿಸಿದ ಜೆ.ಎ.ಪಿ, ಎಸ್.ಡಿ.ಪಿ.ಐ ಹಾಗೂ ಇತರ ಪಕ್ಷಗಳು

Prasthutha|

ಪಾಟ್ನಾ: ಬಿಹಾರ ಅಸೆಂಬ್ಲಿ ಚುನಾವಣೆಯನ್ನು ಎದುರಿಸುವುದಕ್ಕಾಗಿ ಪಪ್ಪು ಯಾದವ್ ರ ಜನ ಅಧಿಕಾರ ಪಾರ್ಟಿ (ಜೆ.ಎ.ಪಿ), ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ  (ಎಸ್.ಡಿ.ಪಿ.ಐ), ಆಝಾದ್ ಸಮಾಜ್ ಪಾರ್ಟಿ (ಎ.ಎಸ್.ಪಿ) ಮತ್ತು ಬಹುಜನ ಮುಕ್ತಿ ಪಾರ್ಟಿ (ಬಿ.ಎಂ.ಪಿ)  ಮಹಾ ಮೈತ್ರಿಯನ್ನು ರಚಿಸಿಕೊಂಡಿವೆ.

ಪ್ರೊಗ್ರೆಸ್ಸೀವ್ ಡೆಮಾಕ್ರಟಿಕ್ ಅಲೈನ್ಸ್ (ಪಿಡಿಎ) ಹೆಸರಿನ ಈ ಹೊಸ ಮೈತ್ರಿಯು ಚುನಾವಣೆಯಲ್ಲಿ ಎನ್.ಡಿ.ಎ, ಜಿಎ ಮತ್ತು ಅಸಾದುದ್ದೀನ್ ಉವೈಸಿಯ ಯುನೈಟೆಡ್ ಡೆಮಾಕ್ರಟಿಕ್ ಸೆಕ್ಯುಲರ್ ಅಲೈನ್ಸ್ (ಯು.ಡಿ.ಎಸ್.ಎ) ಅನ್ನು ಎದುರಿಸಲಿದೆ. ಇಂದು ಬಿಹಾರದ ರಾಜಧಾನಿ ಪಾಟ್ನದ ಚಾಣಕ್ಯ ದರ್ಬಾರ್ ಹೊಟೇಲ್ ಸಭಾಂಗಣದಲ್ಲಿ ಮಹಾಮೈತ್ರಿಯನ್ನು ಘೋಷಿಸಲಾಯಿತು.

- Advertisement -

ಮೈತ್ರಿಯನ್ನು ಸೇರಿಕೊಳ್ಳುವಂತೆ ಉಪೇಂದ್ರ ಕುಶ್ವಾಹರವರ ಆರ್.ಎಲ್.ಎಸ್.ಪಿ, ಎಲ್.ಜೆ.ಪಿ ಮತ್ತು ಕಾಂಗ್ರೆಸ್ ಅನ್ನು ಆಹ್ವಾನಿಸಲಾಗಿದೆ ಎಂದು ಪಪ್ಪು ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೊರೋನಾ ವೈರಸ್ ಸಾಂಕ್ರಾಮಿಕವನ್ನು ಎದುರಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಫಲರಾಗಿದ್ದಾರೆ. ರಾಜ್ಯದ ಸೇವೆ ಮಾಡುವ ಬದಲು ಅಧಿಕಾರದ ವ್ಯಸನಿಯಾಗಿದ್ದಾರೆ ಎಂದು ಯಾದವ್ ಟೀಕಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಪಿ.ಐ ರಾಷ್ಟ್ರೀಯ ಉಪಾಧ್ಯಕ್ಷ ಅಡ್ವೊಕೇಟ್ ಶರಫುದ್ದೀನ್, ಎ.ಎಸ್.ಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಂದ್ರ ಶೇಖರ್ ಆಝಾದ್, ಬಿ.ಎಂ.ಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ವಿ.ಎಲ್. ಮಾಥಂಗ್,  ಎಸ್.ಡಿ.ಪಿ.ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜಸ್ಥಾನದ ಶಫಿ , ಕಾರ್ಯದರ್ಶಿಗಳಾದ ತಸ್ಲೀಮ್ ರೆಹ್ಮಾನಿ ಮತ್ತು ಡಾ. ಮೆಹಬೂಬ್ ಆವಾದ್ ಶರೀಫ್ ಮತ್ತು ಇತರರು ಉಪಸ್ಥಿತರಿದ್ದರು.

- Advertisement -