ಉತ್ತರ ಪ್ರದೇಶ ಚುನಾವಣೆ: ಮೊದಲ ಎರಡು ಹಂತದಲ್ಲಿ ಸಮಾಜವಾದಿ ಪಕ್ಷ ಶತಕ ಬಾರಿಸಿದೆ; ಅಖಿಲೇಶ್ ಯಾದವ್

Prasthutha|

ಫಿರೋಝಾಬಾದ್: ಉತ್ತರ ಪ್ರದೇಶದಲ್ಲಿ ನಡೆದ ಮೊದಲ ಎರಡು ಹಂತದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಈಗಾಗಲೇ ಶತಕ ಬಾರಿಸಿದ್ದು, ನಾಲ್ಕನೇ ಹಂತದ ವೇಳೆಗೆ ಸರ್ಕಾರ ರಚಿಸಲು ಬೇಕಾಗುವ ಸಂಖ್ಯಾಬಲವನ್ನು ಸಂಪಾದಿಸಲಿದೆ ಎಂದು ಪಕ್ಷದ ಮುಖಂಡ ಅಖಿಲೇಶ್ ಯಾದವ್ ತಿಳಿಸಿದ್ದಾರೆ.

- Advertisement -

ಫಿರೋಝಾಬಾದ್ ನಲ್ಲಿ ನಡೆದ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್, ಮೊದಲ ಎರಡು ಹಂತದಲ್ಲಿ ಎಸ್ಪಿ ಈಗಾಗಲೇ ಶತಕ ಬಾರಿಸಿದ್ದು, ನಾಲ್ಕನೇ ಹಂತದ ಮತದಾನದ ವೇಳೆಗೆ ಸಮಾಜವಾದಿ ಪಕ್ಷ ಸರ್ಕಾರ ರಚಿಸುವಷ್ಟು ಸಂಖ್ಯಾಬಲವನ್ನು ಪಡೆಯಲಿದೆ ಎಂದು ತಿಳಿಸಿದರು.

ಸದ್ಯ ಉತ್ತರ ಪ್ರದೇಶದಲ್ಲಿ ಮೊದಲೆರಡು ಹಂತದ ಮತದಾನದಲ್ಲಿ ಕ್ರಮವಾಗಿ 113, 59 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಮೂರನೇ ಹಂತದ ಮತದಾನ ಫೆಬ್ರವರಿ 20 ಮತ್ತು ನಾಲ್ಕನೇ ಹಂತದ ಮತದಾನ ಫೆಬ್ರವರಿ 23 ರಂದು ನಡೆಯಲಿದೆ.

- Advertisement -

ಮೋದಿ ಸರ್ಕಾರ ವಿಮಾನ ನಿಲ್ದಾಣ, ರೈಲು, ರೈಲ್ವೇ ಸೇರಿದಂತೆ ಎಲ್ಲವನ್ನು ಮಾರಾಟ ಮಾಡುತ್ತಿದೆ. ಇದರಿಂದ ಯಾರಿಗೂ ಉದ್ಯೋಗದಲ್ಲಿ ಮೀಸಲಾತಿ ಸಿಗುವುದಿಲ್ಲ ಎಂದು ಆರೋಪಿಸಿದರು.

Join Whatsapp