ಆಮ್ಲಜನಕ ಮಟ್ಟ ಹೆಚ್ಚಿಸಲು ಅರಳಿ ಮರದ ಕೆಳಗೆ ಕುಳಿತುಕೊಳ್ಳುವಂತೆ ಸಲಹೆ ನೀಡಿದ ಯುಪಿ ಪೊಲೀಸರು!

Prasthutha|

ಲಕ್ನೋ : ಆಮ್ಲಜನಕ ದೊರಕದೆ ನರಳುತ್ತಿರುವ ರೋಗಿಗಳಿಗೆ ತಮ್ಮ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಅರಳಿ ಮರಗಳ ಕೆಳಗೆ ಕುಳಿತುಕೊಳ್ಳುವಂತೆ ಪೊಲೀಸರು ಸಲಹೆ ನೀಡಿದ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದೆ. ಆಮ್ಲಜನಕ ಸಿಗದೇ ಪರದಾಡುತ್ತಿದ್ದ ರೋಗಿಗಳ ಸಂಬಂಧಿಕರು ಪೊಲೀಸರು ನೀಡಿದ  ಈ ವಿಲಕ್ಷಣ ಪರಿಹಾರ ಕೇಳಿ ಅಚ್ಚರಿಗೊಂಡಿದ್ದಾರೆ.

ರೋಗಿಯ ಸಂಬಂಧಿಯೊಬ್ಬರು ಆಸ್ಪತ್ರೆಯ ಪರಿಸ್ಥಿತಿಯ ಬಗ್ಗೆ ಕಣ್ಣೀರು ಹಾಕುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಆಸ್ಪತ್ರೆಯಲ್ಲಿ ಜನ ಸೇರುವುದನ್ನು ತಡೆಯಲು ಮನೆಯಲ್ಲಿಯೇ ಉಳಿದು ಚಿಕಿತ್ಸೆ ಪಡೆಯುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಮನೆಯಲ್ಲಿ ರೋಗಿಗೆ ಆಮ್ಲಜನಕ ಹೇಗೆ ಒದಗಿಸುವುದೆಂಬ ಪ್ರಶ್ನೆಗೆ  ರೋಗಿಯು ತಮ್ಮ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಅರಳಿ ಮರದ ಕೆಳಗೆ ಕುಳಿತುಕೊಳ್ಳುವಂತೆ ಅವರಿಗೆ ತಿಳಿಸಲಾಗಿದೆ ಎಂದು ಆರೋಪಿಸಲಾಗಿದೆ.

- Advertisement -

 “ನಿಮ್ಮ ತಾಯಿಯನ್ನು ಕರೆದುಕೊಂಡು ಹೋಗಿ ಅರಳಿ ಮರದ ಕೆಳಗೆ ಕುಳಿತುಕೊಳ್ಳಿ” ಎಂದು ಪೊಲೀಸರೊಬ್ಬರು ಹೇಳಿರುವುದಾಗಿ ರೋಗಿಯ ಸಂಬಂಧಿ ತಿಳಿಸಿದ್ದಾರೆ.

ಇದಕ್ಕೆ, ಇನ್ನೊಬ್ಬರು ಪೊಲೀಸರು ಇದನ್ನು ನಾವು ಎಲ್ಲರಿಗೂ ಹೇಳುತ್ತಿದ್ದೇವೆ : “ಪಿಪಾಲ್ ಕೆ ನೀಚೆ ಬೈಟೋ, ಆಕ್ಸಿಜನ್ ಬಧ್ ಜಾಯೇಗಿ” (ಪೈಪಲ್ ಮರದ ಕೆಳಗೆ ಕುಳಿತುಕೊಳ್ಳಿ, ನಿಮ್ಮ ಆಮ್ಲಜನಕದ ಮಟ್ಟ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

- Advertisement -