ಹಣ ಪಡೆದು ಕೊರೋನಾ ನೆಗೆಟಿವ್ ವರದಿ ನೀಡುತ್ತಿದ್ದ ಇಬ್ಬರ ಬಂಧನ

Prasthutha|

ಬೆಂಗಳೂರು : ಯಾವುದೇ ಸ್ವ್ಯಾಬ್ ಪರೀಕ್ಷೆ ನಡೆಸದೆ ಕೊರೋನಾ ನೆಗೆಟಿವ್ ವರದಿ ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಾಜಸ್ಥಾನ ಮೂಲಕ ಮುಕೇಶ್ ಸಿಂಗ್ ಹಾಗೂ ಸ್ಥಳೀಯ ನಗರದ ನಿವಾಸಿ ನಾಗರಾಜ್ ಎಂದು ಗುರುತಿಸಲಾಗಿದೆ. ಆರೋಪಿಗಳು ಯಾವುದೇ ಸ್ವ್ಯಾಬ್ ಟೆಸ್ಟ್ ನಡೆಸದೇ, ಕೊರೋನಾ ನೆಗೆಟಿವ್ ವರದಿಯನ್ನು ಜನರಿಗೆ ನೀಡುತ್ತಿದ್ದರು ಎನ್ನಲಾಗಿದೆ. ಈ ಖಚಿತ ಮಾಹಿತಿಯನ್ನು ಪಡೆದ ಸಿಸಿಬಿಯ ವಿಶೇಷ ದಳದ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -

ದೊಮ್ಮಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರು ಆರೋಪಿಗಳು, ಕೊರೋನಾ ನೆಗೆಟಿವ್ ವರದಿ ಬೇಕಾದವರಿಗೆ ಯಾವುದೇ ಸ್ವ್ಯಾಬ್ ಟೆಸ್ಟ್ ನಡೆಸದೇ, ರೂ.700 ಪಡೆದು, RT-PCR ನೆಗೆಟಿವ್ ರಿಪೋರ್ಟ್ ಕೊಡ್ತಾ ಇದ್ದರು ಎನ್ನಲಾಗಿದೆ.

- Advertisement -