ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಹೀನಾಯ ಸೋಲಿಗೆ ಮುಸ್ಲಿಮರು ನೇರ ಕಾರಣ । ಮಾಯಾವತಿ ಆರೋಪ

Prasthutha|

ಲಕ್ನೋ: ಉತ್ತರ ಪ್ರದೇಶದ ಇತಿಹಾಸದಲ್ಲಿ ಕೇವಲ 12.8 ಶೇಕಡಾ ಮತಗಳೊಂದಿಗೆ ಬಿಎಸ್ಪಿ ಪಕ್ಷದ ಹೀನಾಯ ಸೋಲಿಗೆ ಮುಸ್ಲಿಮರು ಮತ್ತು ಮಾಧ್ಯಮಗಳು ನೇರ ಕಾರಣವೆಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

- Advertisement -

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಯಾವತಿ, ‘ಬಿಜೆಪಿಯನ್ನು ಸೋಲಿಸಲು ಮುಸ್ಲಿಮರ ತಮ್ಮ ಮತಗಳನ್ನು ಬಿಎಸ್ಪಿ ಬದಲು ಸಮಾಜವಾದಿ ಪಕ್ಷಕ್ಕೆ ವರ್ಗಾಯಿಸಿದ್ದರು. ಸಮಾಜವಾದಿ ಪಕ್ಷ ಅಧಿಕಾರಕ್ಕೇರಿದರೆ ಉತ್ತರ ಪ್ರದೇಶ ಮತ್ತೊಮ್ಮೆ ಜಂಗಲ್ ರಾಜ್ ಆಗಲಿದೆ ಎಂಬ ಭೀತಿಯನ್ನು ಬಿಎಸ್ಪಿ ಬೆಂಬಲಿಗರು, ಮೇಲ್ಜಾತಿ ಹಿಂದೂಗಳು ಮತ್ತು ಹಿಂದುಳಿದ ವರ್ಗಗಳ ಮಧ್ಯೆ ಹರಡಿದ್ದರಿಂದ ನಮ್ಮ ಪಕ್ಷಕ್ಕೆ ಸೋಲಾಗಿದೆ. ಹೀಗಾಗಿ ಹೆಚ್ಚಿನವರು ಬಿಜೆಪಿಯವರು ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಈ ಸೋಲನ್ನು ಮುಂದಿನ ದಿನಗಳಲ್ಲಿ ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ಸಮಾಜವಾದಿ ಪಕ್ಷದಷ್ಟು ಪ್ರಬಲವಾಗಿ ಬಿಎಸ್ಪಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಿಲ್ಲ ಎಂಬ ಸುಳ್ಳುಗಳನ್ನು ಕೂಡ ಹರಡಲಾಯಿತು. ಇದನ್ನು ರಾಜ್ಯದೆಲ್ಲೆಡೆ ವ್ಯಾಪಕವಾಗಿ ಪ್ರಚಾರಪಡಿಸಲಾಯಿತು. ಆದರೆ ವಾಸ್ತವದಲ್ಲಿ ಬಿಜೆಪಿಯೊಂದಿಗೆ ಬಿಎಸ್ಪಿ ಪಕ್ಷದ ಹೋರಾಟವು ರಾಜಕೀಯ ಮತ್ತು ಸೈದ್ಧಾಂತಿಕವಾಗಿದೆ. ಇದು ಬಿಜೆಪಿ ವಿರುದ್ಧದ ಹಿಂದೂ ಮತಗಳನ್ನು ಕೂಡ ತನ್ನ ಪಕ್ಷದಿಂದ ದೂರ ಸರಿಸಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಮಾಯಾವತಿ ನೇತೃತ್ವದ ಬಿಎಸ್ಪಿ ಪಕ್ಷವು 403 ಸ್ಥಾನಗಳಲ್ಲ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕೇವಲ ಮಹಾರಾಜ್ ಗಂಜ್’ನ ರಾಸ್ರಾ ಕ್ಷೇತ್ರದಲ್ಲಿ ಜಯ ಗಳಿಸುವಲ್ಲಿ ಯಶಸ್ವಿಯಾಗಿದೆ.

ಮಾತ್ರವಲ್ಲ ರಾಜ್ಯದ ಮಾಧ್ಯಮಗಳು ಪಕ್ಷದ ವಿರುದ್ಧ ‘ಜಾತಿ ಮತ್ತು ದ್ವೇಷದ ವಿಧಾನವನ್ನು’ ಅನುಸರಿಸಿದ್ದವು ಎಂದು ಆರೋಪಿಸಿದ್ದಾರೆ ಮತ್ತು ಟಿವಿ ಚರ್ಚೆಗಳನ್ನು ಬಹಿಷ್ಕರಿಸುವಂತೆ ಪಕ್ಷದ ವಕ್ತಾರರಿಗೆ ಮಾಯಾವತಿ ಸೂಚಿಸಿದ್ದಾರೆ.

2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಎಸ್‌ಪಿ 97 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಎಸ್‌ಪಿ ಅಲ್ಪಸಂಖ್ಯಾತ ಸಮುದಾಯದ 64 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.



Join Whatsapp