ರೇಪ್ ಕೇಸ್ ದಾಖಲಿಸಲು ಹೋದಾಗ ಪೊಲೀಸರಿಂದಲೇ ರೇಪ್: ಉತ್ತರ ಪ್ರದೇಶದ ಅಪ್ರಾಪ್ತೆಯಿಂದ ಆರೋಪ

Prasthutha|

ಲಖನೌ: ತನ್ನ ಮೇಲೆ ನಡೆದ ಅಮಾನುಷ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಲು ತೆರಳಿದ್ದ ವೇಳೆ ಹಿರಿಯ ಪೊಲೀಸ್ ಅಧಿಕಾರಿ ಮತ್ತೆ ಅತ್ಯಾಚಾರವೆಸಗಿರುವುದಾಗಿ ಉತ್ತರ ಪ್ರದೇಶದ ಲಲಿತ್ ಪುರ ಎಂಬಲ್ಲಿಯ 13 ಹರೆಯದ ಅಪ್ರಾಪ್ತೆ ಆರೋಪಿಸಿದ್ದಾಳೆ.

- Advertisement -

ನಾಲ್ವರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತ ಬಾಲಕಿ ದೂರಿದ್ದು, ಈ ಸಂಬಂಧ ತನ್ನ ಕುಟುಂಬದ ಸದಸ್ಯರೊಂದಿಗೆ ಠಾಣೆಗೆ ದೂರು ನೀಡಲು ತೆರಳಿದ್ದಳು. ಈ ವೇಳೆ ಠಾಣಾಧಿಕಾರಿ ತಿಲಕಧಾರಿ ಸರೋಜ್ ಎಂಬಾತ ಠಾಣೆಯಲ್ಲೇ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ಆರೋಪಿದ್ದಾಳೆ.

ಸದ್ಯ ಆರೋಪಿತ ಪೊಲೀಸ್ ಅಧಿಕಾರಿ ವಿರುದ್ಧ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಲಲಿತ್ ಪುರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಸದ್ಯ ಆರೋಪಿತ ಪೊಲೀಸ್ ಅಧಿಕಾರಿ ತಲೆಮರೆಸಿಕೊಂಡಿದ್ದು, ಮೂರು ಪೊಲೀಸ್ ತಂಡಗಳು ಆತನನ್ನು ಹುಡುಕುತ್ತಿವೆ ಎಂದು ಅವರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.



Join Whatsapp