ಮಹಾರಾಷ್ಟ್ರ | ಆಝಾನ್ ವಿರುದ್ಧ MNS ಕಾರ್ಯಕರ್ತರಿಂದ ಹನುಮಾನ್ ಚಾಲೀಸ ಅಭಿಯಾನ

Prasthutha|

ಮುಂಬೈ: ಮಹಾರಾಷ್ಟ್ರದ ಕೆಲವು ಕಡೆ ಮುಸ್ಲಿಮರ ಆಝಾನ್ ಗೆ ವಿರುದ್ಧವಾಗಿ ರಾಜ್ ಠಾಕ್ರೆ ನೇತೃತ್ವದ MNS ಪಕ್ಷ ಹನುಮಾನ್ ಚಾಲೀಸ ಪಠಿಸುವ ಅಭಿಯಾನ ಪ್ರಾರಂಭಿಸಿದೆ.

- Advertisement -

ಮಹಾರಾಷ್ಟ್ರದ ವಿವಿಧ ನಗರದಲ್ಲಿ ಆಝಾನ್ ಗೆ ವಿರುದ್ಧವಾಗಿ ಹನುಮಾನ್ ಚಾಲೀಸ ಪಠಿಸಲು MNS ಕಾರ್ಯಕರ್ತರು ಯೋಜನೆ ರೂಪಿಸುತ್ತಿದ್ದಾರೆ.

ನಮ್ಮ ವಿರುದ್ಧ ಕಾನೂನು ಕ್ರಮ ಎದುರಿಸಲು ನಾವು ಸಿದ್ಧವಿದ್ದು, ಮುಸ್ಲಿಮರು ಕಾನೂನುಬಾಹಿರವಾಗಿ ಧ್ವನಿವರ್ಧಕಗಳನ್ನು ಪಠಿಸಿದ್ದಕ್ಕಾಗಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು MNS ಮುಖಂಡ ಪಪ್ಪು ಕದಮ್ ತಿಳಿಸಿದ್ದಾರೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯದೆಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಸ್ವತಃ ಮುಂಬೈ ಕಮಿಷನರ್ ಸಂಜಯ್ ಪಾಂಡೆ ಸೇರಿದಂತೆ ಹಿರಿಯ ಅಧಿಕಾರಿಗಳು ಭದ್ರತೆಯ ವ್ಯವಸ್ಥೆಗಳ ಮೇಲಿ ತೀವ್ರ ನಿಗಾ ಇರಿಸಿದ್ದಾರೆ. ಮುಸ್ಲಿಮ್ ಸಮುದಾಯದ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮತ್ತು ಇತರೆಡೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದು, ಇದುವರೆಗೂ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ಒಂದೆಡೆ ಸುಪ್ರೀಮ್ ಕೋರ್ಟ್ ಮಾರ್ಗಸೂಚಿಗಳ ಅನ್ವಯ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಿದೆ ಎಂದು MNS ನಾಯಕರು ಉಲ್ಲೇಖಿಸಿದ್ದಾರೆ. ಇನ್ನೊಂದೆಡೆ ಆಝಾನ್ ವಿರೋಧಿಸಿ MNS ಕಾರ್ಯಕರ್ತರು ಹನುಮಾನ್ ಚಾಲೀಸಾವನ್ನು ಪಠಿಸಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈ ಮಧ್ಯೆ , ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆಯದಿದ್ದರೆ ಮಸೀದಿಗಳ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿಕೆ ನೀಡಿದ್ದ ರಾಜ್ ಠಾಕ್ರೆ ವಿರುದ್ಧ ಮುಂಬೈ ಪೊಲೀಸರು ಸಿಆರ್‌ಪಿಸಿಯ ಸೆಕ್ಷನ್ 149 ರ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿದ್ದಾರೆ.

Join Whatsapp