ಪಂಚರಾಜ್ಯ ಫಲಿತಾಂಶ: ಉತ್ತರ ಪ್ರದೇಶದಲ್ಲಿ ಖಾತೆ ತೆರೆಯಲು AIMIM ವಿಫಲ

Prasthutha|

ಲಕ್ನೋ: ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಉತ್ತರ ಪ್ರದೇಶದಲ್ಲಿ 100 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಅಸದುದ್ದೀನ್ ಉವೈಸಿ ನೇತೃತ್ವದ AIMIM ಪಕ್ಷ ಖಾತೆ ತೆರೆಯಲು ವಿಫಲವಾಗಿದೆ.

- Advertisement -

AIMIM ಮುಖ್ಯಸ್ಥ, ಸಂಸದ ಅಸದುದ್ದೀನ್ ಉವೈಸಿ ಅವರು ಉತ್ತರ ಪ್ರದೇಶಕ್ಕೆ ನಡೆದ ಚುನಾವಣೆಯ ಹಿನ್ನೆಲೆಯಲ್ಲಿ ಮುಸ್ಲಿಮ್, ಒಬಿಸಿ ಮತ್ತು ದಲಿತರಿಗಾಗಿ ಭಾಗೀದಾರ್ ಪರಿವರ್ತನ್ ಮೋರ್ಚಾ ಎಂಬ ನೂತನ ಮೈತ್ರಿಕೂಟವನ್ನು ಪ್ರಾರಂಭಿಸಿದ್ದರು.

ಭಾಗೀದರ್ ಪರಿವರ್ತನ್ ಮೋರ್ಚಾ ಗೆಲುವು ಸಾಧಿಸಿದರೆ ದಲಿತ ಮತ್ತು ಒಬಿಸಿ ನಾಯಕರಿಬ್ಬರನ್ನು ಮುಖ್ಯಮಂತ್ರಿಗಳನ್ನು ಮಾಡುವುದಾಗಿ ಈ ಹಿಂದೆ ಘೋಷಿಸಿದ್ದರು. ಜೊತೆಗೆ ಮೂವರು ಉಪ ಮುಖ್ಯಮಂತ್ರಿಗಳ ಪೈಕಿ ಒಬ್ಬರು ಮುಸ್ಲಿಮರೆಂದು ಘೋಷಿಸಿದ್ದಾರೆ.

- Advertisement -

ಬಾಬು ಸಿಂಗ್ ಕುಶ್ವಾಹ ನೇತೃತ್ವದ ಜನ್ ಅಧಿಕಾರಿ ಪಕ್ಷ, ವಾಮನ್ ಮೆಶ್ರಾಮ್ ನೇತೃತ್ವದ ಭಾರತ್ ಮುಕ್ತಿ ಮೋರ್ಚಾ, ಅನಿಲ್ ಸಿಂಗ್ ಚೌಹಾನ್ ನೇತೃತ್ವದ ಜನತಾ ಕ್ರಾಂತಿ ಪಕ್ಷ ಮತ್ತು ರಾಮ್ ಪ್ರಸಾದ್ ಕಶ್ಯಫ್ ನೇತೃತ್ವದ ಭಾರತೀಯ ವಂಚಿತ್ ಸಮಾಜ ಪಕ್ಷವು ಈ ಮೈತ್ರಿಯ ಭಾಗವಾಗಿತ್ತು.

ಈ ಮಧ್ಯೆ ಸಾಕಷ್ಟು ಕುತೂಹಲ ಮೂಡಿಸಿದ್ದ ಅಸದುದ್ದೀನ್ ಉವೈಸಿ ನೇತೃತ್ವದ AIMIM ಮೈತ್ರಿಕೂಟ ಉತ್ತರ ಪ್ರದೇಶದಲ್ಲಿ ಖಾತೆ ತೆರೆಯಲು ವಿಫಲವಾಗಿದೆ.



Join Whatsapp