ಕ್ರಿಯೇಟಿವ್ ಫೌಂಡೇಶನ್ ನೂತನ ಕಚೇರಿ ಉದ್ಘಾಟನೆ, ಆ್ಯಂಬುಲೆನ್ಸ್ ಲೋಕಾರ್ಪಣೆ

Prasthutha|

ಮಂಗಳೂರು: ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ಇದರ ಸ್ಥಳಾಂತರಿಸಿದ ನೂತನ ಕಚೇರಿ ಹಾಗೂ ಮಾಹಿತಿ ಕೇಂದ್ರ ಉದ್ಘಾಟನೆ ಮತ್ತು ಆಂಬುಲೆನ್ಸ್ ವಾಹನದ ಲೋಕಾರ್ಪಣೆ ಕಾರ್ಯಕ್ರಮವು ಶುಕ್ರವಾರ ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಸಹಕಾರಿ ಸದನದ ಸಂಕೀರ್ಣದಲ್ಲಿ ನಡೆಯಿತು. ನೂತನ ಕಚೇರಿ ಹಾಗೂ ಮಾಹಿತಿ ಮತ್ತು ಸೇವಾ ಕೇಂದ್ರದ ಉದ್ಘಾಟನೆಯನ್ನು ಜಮೀಯತುಲ್ ಫಲಾಹ್ ಮಂಗಳೂರು ನಗರ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ನೆರವೇರಿಸಿದರು.

- Advertisement -


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ನೂತನ ಆಂಬುಲೆನ್ಸ್ ವಾಹನಕ್ಕೆ ಚಾಲನೆ ನೀಡಿ, ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಶ್ಲಾಘಿಸಿದರು.

- Advertisement -


ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಇಂತಹ ಮಾಹಿತಿ ಮತ್ತು ಸೇವಾ ಕೇಂದ್ರವು ತುಂಬಾ ಅಗತ್ಯವಾಗಿದ್ದು, ಕ್ರಿಯೇಟಿವ್ ಫೌಂಡೇಶನ್ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆಯನ್ನಿಟ್ಟಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರಿಯೇಟಿವ್ ಫೌಂಡೇಶನ್ ಅಧ್ಯಕ್ಷ ನಝೀರ್ ಅಹಮದ್ ವಹಿಸಿದ್ದರು. ಅತಿಥಿಗಳಾದ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಇದರ ಸಂಸ್ಥಾಪಕರಾದ ಜನಾಬ್ ಅಬ್ದುಲ್ ರವೂಫ್ ಪುತ್ತಿಗೆ ಸಂಸ್ಥೆಯ ವೆಬ್ಸೈಟ್ ಉದ್ಘಾಟಿಸಿ ಶುಭಹಾರೈಸಿದರು.


ದ.ಕ ಮತ್ತು ಉಡುಪಿ ಜಿಲ್ಲಾ MEIF ಅಧ್ಯಕ್ಷ ಮೂಸಬ್ಬ ಬ್ಯಾರಿ, ಸಂಸ್ಥೆಯ ವಿದ್ಯಾರ್ಥಿ ವೇತನ ತಂತ್ರಾ0ಶಕ್ಕೆ ಚಾಲನೆ ನೀಡಿ ಸಂಸ್ಥೆಯ ಮುಂದಿನ ಯೋಜನೆಯಾದ ಉದ್ಯೋಗ ಮೇಳಕ್ಕೆ ಉಭಯ ಜಿಲ್ಲೆಗಳಲ್ಲಿರುವ “ಮೀಫ್ ” ನೋಂದಾಯಿತ ಶಿಕ್ಷಣ ಸಂಸ್ಥೆಗಳ ಸಹಾಭಾಗಿತ್ವ ದೊರಕಿಸುವುದಾಗಿ ತಿಳಿಸಿದರು.


ಸುಲ್ತಾನ್ ಬಿಲ್ಡರ್ಸ್ ನಿರ್ದೇಶಕ ಮುಹಮ್ಮದ್ ಯು.ಬಿ, ನಿವೃತ್ತ ಅರಣ್ಯ ಉಪವಲಯಾಧಿಕಾರಿ ಮುಹಮ್ಮದ್ ಬ್ಯಾರಿಬೊಳ್ಳಾಯಿ, ಹಿದಾಯ ಫೌಂಡೇಶನ್ ಸೇರಿದಂತೆ ಮಂಗಳೂರಿನ ವಿವಿಧ ಸಾಮಾಜಿಕ ಸಂಘಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐಇಸಿ ಉಸ್ತುವಾರಿಯಾದ ಅಬ್ದುಲ್ ಖಾದರ್ ನಾವೂರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ವಂದಿಸಿದರು.

Join Whatsapp