ಉತ್ತರ ಪ್ರದೇಶ । ದ್ವೇಷ ಭಾಷಣಕಾರ, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್’ಗೆ ಹಿನಾಯ ಸೋಲು

Prasthutha|

ಲಕ್ನೋ: ಪಂಚರಾಜ್ಯ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಉತ್ತರ ಪ್ರದೇಶದಲ್ಲಿ ಹಾಲಿ ಉಪ ಮುಖ್ಯಮಂತ್ರಿ, ದ್ವೇಷ ಭಾಷಣಕ್ಕೆ ಹೆಸರುವಾಸಿಯಾದ ಕೇಶವ್ ಪ್ರಸಾದ್ ಮೌರ್ಯ ಅವರು ಹೀನಾಯವಾಗಿ ಸೋಲನುಭವಿಸಿದ್ದಾರೆ.

- Advertisement -

ಸಿರತು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ತನ್ನ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಡಾ. ಪಲ್ಲವಿ ಪಟೇಲ್ ವಿರುದ್ಧ 7,337 ಮತಗಳ ಭಾರೀ ಅಂತರದಿಂದ ಹೀನಾಯವಾಗಿ ಸೋತಿದ್ದಾರೆ.

ದ್ವೇಷ ಭಾಷಣಗಳ ಮೂಲಕ ಸದಾ ಮುಸ್ಲಿಮರನ್ನು ಅವಹೇಳನ ನಡೆಸುತ್ತಿದ್ದ ಮೌರ್ಯ ಅವರು ತನ್ನ ಸೋಲನ್ನು ಒಪ್ಪಿದ್ದು, ಕ್ಷೇತ್ರದ ಮತದಾರರು ಮತ್ತು ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

- Advertisement -

ಕೇಶವ್ ಪ್ರಸಾದ್ ಮೌರ್ಯ ಅವರು ಆರೆಸ್ಸೆಸ್ – ಬಿಜೆಪಿ ಬೆಳೆಸಿದ ಮೌರ್ಯ ಸಮುದಾಯದ ಮುಖವಾಗಿದ್ದು, ಯಾದವೇತರ ಹಿಂದುಳಿದ ವರ್ಗದ ಸಮುದಾಯಗಳಲ್ಲಿ (ಒಬಿಸಿ) ಹಿಂದುತ್ವದ ಸಿದ್ಧಾಂತವನ್ನು ಭದ್ರಗೊಳಿಸಿದ್ದರು.

‘ತಲೆಗೆ ಟೋಪಿ ಹಾಕಿದವರಿಂದ ರಾಜ್ಯದ ಕಾನೂನು, ಸುವ್ಯವಸ್ಥೆ ಹದಗೆಡಲು ಪ್ರಮುಖ ಕಾರಣವೆಂದು ಮೌರ್ಯ, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತರನ್ನು ಉದ್ರೇಕಿಸಿದ್ದರು.

ಚುನಾವಣಾ ಪ್ರಚಾರದ ಭಾಗವಾಗಿ ಅಲಹಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೌರ್ಯ, ‘2017 ರ ಮೊದಲು ಎಷ್ಟು ಜನ ಲುಂಗಿ ಧರಿಸಿದ ಗೂಂಡಾಗಳು ರಾಜ್ಯದಲ್ಲಿದ್ದರು. ಟೋಪಿ ಧಾರಿಗಳು ಬಂದೂಕುಗಳನ್ನು ಹಿಡಿದು ವ್ಯಾಪಾರಿಗಳಿಗೆ ಬೆದರಿಕೆ ಹಾಕುತ್ತಿದ್ದವರು ಯಾರು?. ಜಮೀನನ್ನು ಅತಿಕ್ರಮಿಸಿ ಪೊಲೀಸರಿಗೆ ಬೆದರಿಕೆ ಹಾಕುತ್ತಿದ್ದವರು ಯಾರು ಎಂಬುದನ್ನು ನೆನೆಸಿಕೊಳ್ಳುವಂತೆ ನೆರೆದವರನ್ನು ಪ್ರಚೋದಿಸಿದ್ದರು.

ಈ ಹಿಂದೆ ತನ್ನ ಭಾಷಣವೊಂದರಲ್ಲಿ ಅಯೋದ್ಯೆ ಕೇವಲ ಟ್ರೇಲರ್ ಮಾತ್ರ, ಕಾಶಿ ಮತ್ತು ಮಥುರಾ ಇನ್ನೂ ಬಾಕಿ ಉಳಿದಿದೆ ಎಂಬ ಘೋಷಣೆ ಕೂಗಿ ಜನರನ್ನು ಹಿಂಸಾತ್ಮಕವಾಗಿ ಪ್ರಚೋದಿಸಿ ಗಮನ ಸೆಳೆದಿದ್ದರು.

ಮಾತ್ರವಲ್ಲ ಆಯೋದ್ಯೆ ಮತ್ತು ವಾರಣಾಸಿಯಲ್ಲಿ ಭವ್ಯವಾದ ದೇವಾಲಯಗಳು ನಿರ್ಮಾಣವಾಗುತ್ತಿದೆ. ಮಥುರಾ ಮಂದಿರ ನಿರ್ಮಾಣಕ್ಕೆ ಸಿದ್ಧತೆ ಆಗುತ್ತಿದೆ ಎಂದು ತಿಳಿಸಿದ್ದರು.

Join Whatsapp