ಯುಪಿಯ ಅಭಿವೃದ್ಧಿ ಎಂದು ಬಿಂಬಿಸಲು ಪ.ಬಂಗಾಳದ ಮೇಲ್ಸೇತುವೆ ಫೋಟೋ ಬಳಸಿ ಜಾಹೀರಾತು ನೀಡಿ ನಗೆಪಾಟಲಿಗೀಡಾದ ಯೋಗಿ ಆದಿತ್ಯನಾಥ್

Prasthutha|

ಮಥುರಾ: ಚುನಾವಣೆಯ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಲೇ ಜಾಹೀರಾತು ಮೊರೆ ಹೋಗಿದ್ದು, ಜನರನ್ನು ಸೆಳೆಯುವ ಕೆಲಸದಲ್ಲಿ ತೊಡಗಿದ್ದಾರೆ.

- Advertisement -

ಯುಪಿಯ ಅಭಿವೃದ್ಧಿ ಹೊಂದಿದೆ ಎಂದು ಬಿಂಬಿಸಲು ಕೊಲ್ಕತ್ತಾದ ಮೇಲ್ಸೇತುವೆಯೊಂದರ ಫೋಟೋ ಬಳಸಿದ ಜಾಹೀರಾತನ್ನು ಆದಿತ್ಯನಾಥ್ ಭಾನುವಾರ ಪ್ರಮುಖ ಪತ್ರಿಕೆಗಳಿಗೆ ನೀಡುವ ಮೂಲಕ ನಗೆಪಾಟಲಿಗೆ ಗುರಿಯಾಗಿದ್ದಾರೆ. ಜಾಹೀರಾತು ನೋಡಿದ ಸಾರ್ವಜನಿಕರು ಮುಸಿ ಮುಸಿ ನಗುವಂತಾಗಿದ್ದು, ಪಶ್ಚಿಮಬಂಗಾಳದ ಜನರಂತೂ ಬಿದ್ದು ಬಿದ್ದು ನಗುತ್ತಿದ್ದಾರೆ.

ಜಾಹೀರಾತಿನ ವಾಸ್ತವಿಕತೆ ಕುರಿತು ಫ್ಯಾಕ್ಟ್ ಚೆಕ್ ಮಾಡಿದಾಗ ಈ ಪ್ಲೈ ಓವರ್, ಪಶ್ಚಿಮ ಬಂಗಾಳದಲ್ಲಿ 24, 2016 ರಂದು ಉದ್ಘಾಟನೆಗೊಂಡಿದೆ ಎಂಬುದು ಬಹಿರಂಗಗೊಂಡಿದೆ. ಈ ಸಂದರ್ಭದಲ್ಲಿ ಯೋಗಿ ಅದಿತ್ಯನಾಥ್ ಇನ್ನೂ ಮುಖ್ಯಮಂತ್ರಿಯೇ ಆಗಿರಲಿಲ್ಲ.

- Advertisement -

ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಟ್ವಿಟ್ಟರ್ ನಲ್ಲಿ ನೆಟ್ಟಿಗರು ಬಂಗಾಳದ ಫ್ಲೈಓವರ್ ಅನ್ನು ಯುಪಿಗೆ ಸ್ಥಳಾಂತರಿಸುವ ಮೂಲಕ ಯೋಗಿ ಅದ್ಭುತ ಸಾಧನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸಂಸದೆ ಮಹೋಯಿ ಮೈತ್ರಾ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಕೂಡ ಈ ಜಾಹೀರಾತನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿ ಯೋಗಿಯ ಕಾಲೆಳೆದಿದ್ದಾರೆ.



Join Whatsapp