ನಾಳೆಯಿಂದ ಕಮರ್ಷಿಯಲ್ ಸ್ಟ್ರೀಟ್ ಬಂದ್ !

Prasthutha|

ಬೆಂಗಳೂರು; ನಗರದ ಪ್ರಮುಖ ಹಾಗೂ ಹಳೇಯ ವ್ಯಾಪಾರ ವಹಿವಾಟಿನ ತಾಣ ಎನಿಸಿರುವ ಕಮರ್ಷಿಯಲ್ ಸ್ಟ್ರೀಟ್ ಸೋಮವಾರ ರಾತ್ರಿಯಿಂದ 14 ದಿನಗಳ ಕಾಲ ಬಂದ್ ಮಾಡಲಾಗುತ್ತಿದೆ.


ಸ್ಮಾರ್ಟ್ ಸಿಟಿ ಯೋಜನೆಯಡಿ ಪೂರ್ಣಗೊಂಡ ಇತ್ತೀಚಿಗೆ ಕೈಗೊಂಡ ಕಾಮಗಾರಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಲು 14 ದಿನಗಳವರೆಗೆ ಮುಚ್ಚಲಾಗುತ್ತಿದೆ ಎಂದು ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ತಿಳಿಸಿದೆ.
ಇತ್ತೀಚೆಗೆ‌ ಕಮರ್ಷಿಯಲ್ ಸ್ಟ್ರೀಟ್ ನ‌ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜುಲೈನಲ್ಲಿ ಚಾಲನೆ ನೀಡಿದ್ದರು. ಆದರೆ,ಕಲ್ಲಿನ ರಸ್ತೆಯಲ್ಲಿ ಮತ್ತೆ ಸಮಸ್ಯೆ ಉಲ್ಬಣಗೊಂಡ ಪರಿಣಾಮ ಮತ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

- Advertisement -


ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಇಲ್ಲಿ ರಸ್ತೆಯ ಕ್ಯೂರಿಂಗ್‌ ಗೆ ಸೂಕ್ತ ಸಮಯಕ್ಕಿಂತ ಮುಂಚಿತವಾಗಿ ವಾಹನ ಚಲನೆಯು ನೆಲಗಟ್ಟಿನ ಕಲ್ಲುಗಳ ಹಾನಿಗೆ ಕಾರಣವಾಗಿದೆ ಎಂದರು.


ನಾವು ಈಗಾಗಲೇ ಗುತ್ತಿಗೆದಾರರಿಗೆ ಶೇ.10ರಷ್ಟು ದಂಡ ವಿಧಿಸಿದ್ದೇವೆ ಮತ್ತು ಪೇವರ್‌ಗಳನ್ನು ಬದಲಿಸಲು ಸೂಚಿಸಿದ್ದೇವೆ ಎಂದ ಅವರು, ಕಾಮಗಾರಿ ಸಂಬಂಧ ಹಣವೂ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

- Advertisement -