ಮಥುರಾ-ವೃಂದಾವನ್ 10.ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ-ಮಾಂಸ ನಿಷೇಧಿಸಿದ ಉತ್ತರ ಪ್ರದೇಶ ಸರಕಾರ

Prasthutha|

ಲಕ್ನೋ : ಉತ್ತರ ಪ್ರದೇಶದ ಮಥುರಾ-ವೃಂದಾವನ್ ನ 10 ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ತೀರ್ಥಕ್ಷೇತ್ರ ಎಂದು ಘೋಷಿಸಿದ ಮುಖ್ಯಮಂತ್ರಿ ಆದಿತ್ಯನಾಥ್, ಮಾಂಸ ಮತ್ತು ಮದ್ಯ ನಿಷೇದಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 30 ರಂದು ಮಥುರಾದಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆದಿತ್ಯನಾಥ್, ಮಥುರಾ-ವೃಂದಾವನ ಅವಳಿ ನಗರಗಳಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಯುಪಿ ಸರ್ಕಾರವು ಈ ನಿಯಮವನ್ನು ಕಟ್ಟುಬದ್ಧವಾಗಿ ಜಾರಿಗೆ ತಂದಿದೆ.

- Advertisement -