ಜಾಹೀರಾತಿನಲ್ಲಿ ಮೋಹನ್ ಭಾಗವತ್ ಚಿತ್ರ| ಕಂಪೆನಿ ಮಾಲೀಕನ ವಿರುದ್ಧ ಪ್ರಕರಣ

Prasthutha|

ಲಖ್ನೋ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಚಿತ್ರವನ್ನು ಜಾಹೀರಾತಿನಲ್ಲಿ ಬಳಸಿದ್ದಕ್ಕಾಗಿ ಜಾಹೀರಾತು ಕಂಪೆನಿ ಮಾಲೀಕನ ವಿರುದ್ಧ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ಆರೆಸ್ಸೆಸ್ ರಾಜ್ಯಾಧ್ಯಕ್ಷ ಸುರೇಂದರ್ ಸಿಂಗ್ ಅವರ ದೂರಿನ ಮೇರೆಗೆ ಜಾಹೀರಾತು ಕಂಪೆನಿ ಮಾಲೀಕ ಸತ್ಯಪ್ರಕಾಶ್ ರೇಶು ವಿರುದ್ಧ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ.
ಕಂಪೆನಿಯ ಮಾಲೀಕ ಸತ್ಯ ಪ್ರಕಾಶ್ ರೇಶು ವಿರುದ್ಧ ಐಪಿಸಿ ಸೆಕ್ಷನ್ 505 (1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (SHO) ಬ್ರಿಜೇಂದರ್ ಕುಮಾರ್ ರಾವತ್ ತಿಳಿಸಿದ್ದಾರೆ.

ಜಾಹೀರಾತು ಕಂಪನಿ ಮಾಲೀಕರು ಅನುಮತಿಯಿಲ್ಲದೆ ಭಾಗವತ್ ಅವರ ಫೋಟೋ ಬಳಸಿದ್ದಾರೆ ಎಂದು ಆರೆಸ್ಸೆಸ್ ಆರೋಪಿಸಿದೆ.

Join Whatsapp