ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆಯಾದ ಪರಿಣಾಮ ಸಿಡಿಲು ಬಡಿದು ಐದು ಮಂದಿ ಸಾವನ್ನಪ್ಪಿದ್ದು, ಹದಿಮೂರು ಜಾನುವಾರುಗಳು ಮೃತಪಟ್ಟಿವೆ.
ಶರಣಪ್ಪ ಪುರದ (19) , ದೇವರಾಜ ಹನುಮಂತಪ್ಪ (19), ಬೋಗಪ್ಪ(60), ಯಂಕೂಬಾಯಿ ಕುಲಕರ್ಣಿ(79), ಶಾರವ್ವ ಪತ್ತಾರ(58) ಮೃತರು.
ದಕ್ಷಿಣ ಕನ್ನಡ, ಉಜಿರೆ, ಧರ್ಮಸ್ಥಳ, ಮುಂಡಾಜೆ, ಗದಗ, ಕೊಪ್ಪಳ, ಕಲಬುರಗಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಶುಕ್ರವಾರ ಆಲಿಕಲ್ಲು ಸಹಿತ ಜೋರು ಮಳೆಯಾಗಿದೆ. ಜೋರು ಮಳೆಗೆ ಕೆಲವೆಡೆ ಬೇಸಿಗೆ ಬೆಳೆಗಳಿಗೆ ಹಾನಿಯಾಗಿದೆ.