ನವದೆಹಲಿ: ರಾಮ ನವಮಿ ಸಂದರ್ಭದಲ್ಲಿ ಬಿಹಾರ, ಪಶ್ಚಿಮ ಬಂಗಾಳ ಮೊದಲಾದ ಕಡೆ ಕೋಮು ಗಲಭೆ ನಡೆದ ಬೆನ್ನಲ್ಲೇ ಉತ್ತರ ಪ್ರದೇಶದ ಪೊಲೀಸರು ಆಗ್ರಾದಲ್ಲಿ ಸಂಘಪರಿವಾರದ ಕಾರ್ಯಕರ್ತರು ಗೋ ಹತ್ಯೆ ಮಾಡಿ ಅದನ್ನು ಮುಸ್ಲಿಮರ ತಲೆಗೆ ಕಟ್ಟಲು ಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಅಖಿಲ ಭಾರತ ಹಿಂದು ಮಹಾಸಭಾದ ನಾಲ್ಕು ಮಂದಿಯನ್ನು ಆಗ್ರಾದಲ್ಲಿ ಬಂಧಿಸಲಾಗಿದೆ.
ಹಿಂದೂ ಮಹಾ ಸಭಾದ ಸದಸ್ಯರು ಆಗ್ರಾದಲ್ಲಿ ಕೋಮು ಗಲಭೆ ಎಬ್ಬಿಸಲು ಜಾನುವಾರು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಆದರೆ ಗೋ ಹತ್ಯೆ ಮಾಡಿದವರಲ್ಲಿ ಅವರಿಗಿದ್ದ ಅನುಭವದ ಕೊರತೆ ಅವರ ಮಾಂಸದಲ್ಲಿ ಎದ್ದು ಕಂಡಿದೆ. ಎತೇಮದ್ ಉದ್ ದೌಲಾ ಪೊಲೀಸ್ ಠಾಣೆಯ ವ್ಯಾಪ್ತಿಯ ಗೌತಮ್ ನಗರದ ನ್ಯೂ ಗುಪಾದಲ್ಲಿ ಈ ಜಾನುವಾರು ಹತ್ಯೆ ಮಾಡಲಾಗಿದೆ.
ಮುಖ್ಯ ಆರೋಪಿಯಾಗಿ ಸಂಜಯ್ ಜಾತ್ ಎಂಬವನನ್ನು ಪೊಲೀಸರು ಬಂಧಿಸಿದ್ದು, ಜಾನುವಾರು ಹತ್ಯೆ ಸಂಚಿನಲ್ಲಿ ಹಲವು ಅಖಿಲ ಭಾರತ ಹಿಂದು ಸಭಾ ಸದಸ್ಯರು ಪಾಲ್ಗೊಂಡಿದ್ದಾರೆ. ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಸಂಜಯ್ ಜಾತ್, ನನ್ನನ್ನು ಮತ್ತು ನನ್ನ ಗೆಳೆಯರನ್ನು ಇದರಲ್ಲಿ ತಪ್ಪಾಗಿ ಸಿಕ್ಕಿಸಲಾಗಿದೆ. ನಮಗೆ ಈ ಸುದ್ದಿ ಹೇಳಿಕೆಯಿಂದಷ್ಟೆ ತಿಳಿದು ಬಂದಿದೆ ಎಂದರು.