ಅವೈಜ್ಞಾನಿಕ ಹಂಪ್: ಕೈ ಮುರಿದುಕೊಂಡ ಸವಾರ

Prasthutha|

ಬೆಂಗಳೂರು: ವಾಹನ ಸವಾರರ ಅತಿವೇಗಕ್ಕೆ ಬ್ರೇಕ್ ಹಾಕಲು ನಗರದಲ್ಲಿ ಕೆಲವೆಡೆ ಅವೈಜ್ಞಾನಿಕವಾಗಿ ಅಳವಡಿಸಿರುವ ರಸ್ತೆ ಹಂಪ್’ಗಳಿಂದ ಅಪಘಾತಗಳು ಉಂಟಾಗುತ್ತಿದ್ದು. ಜಯನಗರದ ಮೌಂಟ್ ಕಾರ್ಮೆಲ್ ಶಾಲೆ ಸಮೀಪ ಇರುವ ಅವೈಜ್ಞಾನಿಕ ಹಂಪ್ ಗೆ ಬಿದ್ದು ಬೈಕ್ ಸವಾರರೊಬ್ಬರು ಕೈ ಮುರಿದುಕೊಂಡ ಘಟನೆ ನಡೆದಿದೆ.

- Advertisement -


ರಾತ್ರಿ ವೇಳೆ ಹಂಪ್ ಕಾಣದೆ ಬೈಕ್ ಸ್ಕಿಡ್ ಆಗಿ ಸವಾರ ಇರ್ಷಾದ್ ಕೈಮುರಿದುಕೊಂಡು ಗಾಯಗೊಂಡಿದ್ದಾರೆ.
ಟ್ವಿಟರ್ ಹಾಗೂ ಫೇಸ್ ಬುಕ್’ನಲ್ಲಿ ಬಿಬಿಎಂಪಿ ಹಾಗೂ ಸಂಚಾರ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಸವಾರ ಇರ್ಷಾದ್ ಆಕ್ರೋಶ ಹೊರ ಹಾಕಿದ್ದಾರೆ.


ಪ್ರತಿ ನಿತ್ಯ ನಾಲ್ಕೈದು ಮಂದಿಗೆ ಗಾಯ
ನಿತ್ಯ ಇದೇ ರಸ್ತೆಯಲ್ಲಿ ಮೂರರಿಂದ ನಾಲ್ಕು ಜನ ಬಿದ್ದು ಗಾಯಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಹಂಪ್ಸ್ ಕಾಣದೆ ಬಿದ್ದು ಹಲವರಿಗೆ ಗಂಭೀರ ಗಾಯಗಳಾಗಿವೆ. ಬಿದ್ದಾಗ ಕೆಲವರಿಗೆ ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿ 50 ಸಾವಿರದಿಂದ ಒಂದೂವರೆ ಲಕ್ಷ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಕ್ರಮಕೈಗೊಳ್ಳಿ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.

- Advertisement -


ರಾತ್ರಿ ಕೆಲಸ ಮುಗಿಸಿಕೊಂಡು ಜೆಪಿ ನಗರದಿಂದ ಆಡುಗೋಡಿಗೆ ತೆರಳುತ್ತಿದ್ದ ಪತ್ರಕರ್ತ ಇರ್ಷಾದ್ ಜಯನಗರದ ಬಳಿಯಿರುವ ಮೌಂಟ್ ಕಾರ್ಮೆಲ್ ಶಾಲೆಯ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಕೈ ಮುರಿದುಕೊಂಡಿದ್ದಾರೆ. ಕತ್ತಲಿದ್ದರಿಂದ ರಸ್ತೆಯಲ್ಲಿದ್ದ ಹಂಪ್ಸ್ ಕಾಣದೆ ಬೈಕ್ ಸ್ಕಿಡ್ ಆಗಿದೆ. ಬೈಕ್’ನಿಂದ ಬಿದ್ದಾಗ ಸವಾರ ಇರ್ಷಾದ್ ಕೈಗೆ ಗಾಯವಾಗಿತ್ತು. ಹಂಪ್ ಮೇಲೆ ಕ್ಯಾಟ್ ಐ ಇಲ್ಲದಿರುವುದು ಘಟನೆ ಕಾರಣ ಎನ್ನಲಾಗಿದೆ.



Join Whatsapp