ತೋಟಕ್ಕೆ ಉರುಳಿ ಬಿದ್ದ ಕೆಎಸ್’ಆರ್’ಟಿಸಿ ಬಸ್: ಹಲವು ಪ್ರಯಾಣಿಕರಿಗೆ ಗಾಯ

Prasthutha|

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ ಆರ್ ಟಿಸಿ ಬಸ್ಸೊಂದು ಮಂಗಳವಾರ ಇಲ್ಲಿನ ವಿರಾಜಪೇಟೆ ತಾಲ್ಲೂಕಿನ ಅಮ್ಮತಿ ಕಾವಾಡಿ ಎಂಬಲ್ಲಿ ಕಂದಕಕ್ಕೆ ಉರುಳಿದ ಘಟನೆ ನಡೆದಿದ್ದು, ಸುಮಾರು 40 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

- Advertisement -


ಎರ್ನಾಕುಲಂನಿಂದ ವಿರಾಜಪೇಟೆ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಮಂಗಳವಾರ ಬೆಳಗ್ಗೆ 4.30 ಸಮಯದಲ್ಲಿ ಅಮ್ಮತ್ತಿ ಸಮೀಪದ ಕಾವಡಿ ಬಳಿ ಮಗುಚಿ ಬಿದ್ದಿದೆ.
ಗಾಯಳುಗಳನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಸ್ಸಿನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಮಂಜು ಆವರಿಸಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

Join Whatsapp