ಉನ್ನಾವೋ ರೇಪ್ ಸಂತ್ರಸ್ತೆಯ ತಾಯಿ ವಿರುದ್ಧ SP ಸ್ಪರ್ಧಿಸಲ್ಲ: ಅಖಿಲೇಶ್ ಯಾದವ್

Prasthutha|

ಲಖನೌ:  ಕಾಂಗ್ರೆಸ್ ನಿಂದ  ಉನ್ನಾವೋ ರೇಪ್ ಸಂತ್ರಸ್ತೆ ತಾಯಿ ಆಶಾ ಸಿಂಗ್ ಗೆ ಟಿಕೆಟ್ ಖಚಿತಗೊಳ್ಳುತ್ತಿದ್ದಂತೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮಹತ್ವದ ನಿರ್ಧಾರ ಕೈಗೊಂಡಿದೆ. ಆಶಾ ಸಿಂಗ್ ಸ್ಪರ್ಧಿಸುತ್ತಿರುವ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಮುಂದಾಗಿದೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಖುದ್ದಾಗಿ ಮಾಹಿತಿ ನೀಡಿದ್ದು, ಆಶಾ ಸಿಂಗ್ ಅವರ ಎದುರು ನಮ್ಮ ಪಕ್ಷದ ಅಭ್ಯರ್ಥಿ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಜೊತೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಸಂಪೂರ್ಣವಾದ ಬೆಂಬಲ ನೀಡಲು ಸಮಾಜವಾದಿ ಪಕ್ಷ ಮುಂದಾಗಿದೆ.

2017ರಲ್ಲಿ ಉನ್ನಾವೋದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೇಂಗರ್ ಅಗಿದ್ದು, ಪ್ರಕರಣದಲ್ಲಿ ಶಾಸಕನ ಹೆಸರು ಕೇಳಿ ಬರುತ್ತಿದ್ದಂತೆ ಪಕ್ಷದಿಂದ ಆತನನ್ನು ಉಚ್ಚಾಟನೆ ಮಾಡಲಾಗಿತ್ತು.

Join Whatsapp