ಆಸ್ತಿಗಳ ಮೇಲಿನ ನಿಷೇಧವನ್ನು ಹಿಂಪಡೆಯಲು ವಿಶ್ವಸಂಸ್ಥೆ ಮುಖ್ಯಸ್ಥರ ಕರೆ ಸ್ವಾಗತಾರ್ಹ: ತಾಲಿಬಾನ್

Prasthutha|

ಕಾಬೂಲ್: ಯುದ್ಧ ಪೀಡಿತ ದೇಶದ ಆಸ್ತಿಗಳ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಅಮೆರಿಕವನ್ನು ಒತ್ತಾಯಿಸಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರ ನಿರ್ಧಾರವನ್ನು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಸ್ವಾಗತಿಸಿದೆ.

- Advertisement -

ಅಮೆರಿಕದಿಂದ ಅಫ್ಘಾನ್ ರಾಜಧಾನಿಯನ್ನು ಮುಕ್ತಗೊಳಿಸಲು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯ ಕರೆಯನ್ನು ನಾವು ಶ್ಲಾಘಿಸುತ್ತೇವೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿರುವುದನ್ನು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ವರ್ಷ ಆಗಸ್ಟ್ ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಪರಿಣಾಮವಾಗಿ ಸುಮಾರು 9 ಶತಕೋಟಿ ಡಾಲರ್ ಅಫ್ಘಾನಿ ಸೆಂಟ್ರಲ್ ಬ್ಯಾಂಕ್ ಗೆ ಸೇರಿದ ಆಸ್ತಿಯನ್ನು ಸ್ಥಗಿತಗೊಳಿಸಿತ್ತು ಮತ್ತು ವಿಶ್ವ ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿಯನ್ನು ಸ್ಥಗಿತಗೊಳಿಸಿತ್ತು.

- Advertisement -

ತೀವ್ರ ರೀತಿಯ ಹಣದ ಕೊರತೆಯು ಆರ್ಥಿಕ ಕುಸಿತ ಮತ್ತು ಅಭೂತಪೂರ್ವ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ.

ಅಫ್ಘಾನಿಸ್ತಾನದಲ್ಲಿ ತಲೆದೋರುತ್ತಿರುವ ಸಾಮಾಜಿಕ ಅಸಮಾನತೆ ತಡೆಯಲು ಅಫ್ಘಾನಿ ನಿಧಿಯನ್ನು ಸ್ಥಗಿತಗೊಳಿಸುವಂತೆ ಗುರುವಾರ ವಿಶ್ವಸಂಸ್ಥೆಯ ಗುಟೆರೆಸ್ ಅವರು ಅಮೆರಿಕ ಮತ್ತು ವಿಶ್ವಬ್ಯಾಂಕನ್ನು ಒತ್ತಾಯಿಸಿದರು.

Join Whatsapp