ಲಖನೌ: ಕಾಂಗ್ರೆಸ್ ನಿಂದ ಉನ್ನಾವೋ ರೇಪ್ ಸಂತ್ರಸ್ತೆ ತಾಯಿ ಆಶಾ ಸಿಂಗ್ ಗೆ ಟಿಕೆಟ್ ಖಚಿತಗೊಳ್ಳುತ್ತಿದ್ದಂತೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮಹತ್ವದ ನಿರ್ಧಾರ ಕೈಗೊಂಡಿದೆ. ಆಶಾ ಸಿಂಗ್ ಸ್ಪರ್ಧಿಸುತ್ತಿರುವ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಮುಂದಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಖುದ್ದಾಗಿ ಮಾಹಿತಿ ನೀಡಿದ್ದು, ಆಶಾ ಸಿಂಗ್ ಅವರ ಎದುರು ನಮ್ಮ ಪಕ್ಷದ ಅಭ್ಯರ್ಥಿ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಜೊತೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಸಂಪೂರ್ಣವಾದ ಬೆಂಬಲ ನೀಡಲು ಸಮಾಜವಾದಿ ಪಕ್ಷ ಮುಂದಾಗಿದೆ.
2017ರಲ್ಲಿ ಉನ್ನಾವೋದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೇಂಗರ್ ಅಗಿದ್ದು, ಪ್ರಕರಣದಲ್ಲಿ ಶಾಸಕನ ಹೆಸರು ಕೇಳಿ ಬರುತ್ತಿದ್ದಂತೆ ಪಕ್ಷದಿಂದ ಆತನನ್ನು ಉಚ್ಚಾಟನೆ ಮಾಡಲಾಗಿತ್ತು.