ಉನ್ನಾವೋ ಬಿಜೆಪಿ ಶಾಸಕನ ಕೆನ್ನೆಗೆ ಬಾರಿಸಿದ ರೈತ: ವೀಡಿಯೋ ವೈರಲ್

Prasthutha|

- Advertisement -

ಲಕ್ನೋ: ಉನ್ನಾವೋ ಬಿಜೆಪಿ ಶಾಸಕ ಪಂಕಜ್ ಗುಪ್ತಾ ಅವರಿಗೆ ರೈತನೊಬ್ಬ ಕೆನ್ನೆಗೆ ಬಾರಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಶಾಸಕ ʼಆತ ಕೆನ್ನೆಗೆ ತಟ್ಟಿದರು ಅಷ್ಟೇʼ ಎಂದು ಹೇಳಿದ್ದಾರೆ.

ಒಟ್ಟು 21 ಸೆಕೆಂಡ್ ಅವಧಿಯ ಈ ವೀಡಿಯೋ ಕ್ಲಿಪ್ ಮೂರು ದಿನಗಳ ಹಿಂದೆ ತೆಗೆದಿದ್ದೆನ್ನಲಾಗಿದ್ದು ಪ್ರತಿಮೆ ಅನಾವರಣ ಕಾರ್ಯಕ್ರಮವೊಂದರ ಭಾಗವಾಗಿ ಶಾಸಕ ವೇದಿಕೆಯಲ್ಲಿ ಕುಳಿತಿದ್ದ ಸಂದರ್ಭ ವೃದ್ಧನೊಬ್ಬ ಅವರ ಹತ್ತಿರಕ್ಕೆ ಬಂದು ಕೆನ್ನೆಗೆ ಬಾರಿಸಿದ್ದಾರೆ. ಆಗ ಒಂದಿಬ್ಬರು ವ್ಯಕ್ತಿಗಳು ಸುತ್ತುವರಿದು ಆತನನ್ನು ಪ್ರಶ್ನಿಸಿ ವೇದಿಕೆಯ ಕೆಳಕ್ಕೆ ತರುತ್ತಾರೆ.

- Advertisement -

ಇನ್ನು ಈ ವಿಚಾರವಾಗಿ ಟ್ವೀಟ್ ಮಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್,”ಕೆನ್ನೆಗೆ ಬಾರಿಸಿದ್ದು ಶಾಸಕರಿಗಲ್ಲ, ಬದಲು ಬಿಜೆಪಿ ನೇತೃತ್ವದ ಯೋಗಿ ಆದಿತ್ಯನಾಥ್ ಸರಕಾರದ ಕೆಟ್ಟ ನೀತಿಗಳು, ಆಡಳಿತ ಮತ್ತು ಸರ್ವಾಧಿಕಾರದ ಆಳ್ವಿಕೆಗೆ” ಎಂದು ಬರೆದಿದ್ದಾರೆ. ಇದೀಗ ಶಾಸಕ ಆತ ತನ್ನ ಕೆನ್ನೆಗೆ ತಟ್ಟಿದ ಅಷ್ಟೇ ಎಂದು ಹೇಳಿದರೆ ಆ ವೃದ್ಧ ಪ್ರತಿಕ್ರಿಯಿಸಿ “ನಾನು ಅವರಿಗೆ ಹೊಡೆದಿಲ್ಲ. ಅವರ ಹತ್ತಿರಕ್ಕೆ ಬಂದು ಬೇಟಾ ಎನ್ನುತ್ತಾ ಏನನ್ನೋ ಹೇಳಿದೆ” ಎಂದಿದ್ದಾರೆ.

Join Whatsapp