ಈಗಿನ ಪ್ರಧಾನಿಯಂತಲ್ಲ, ಮನಮೋಹನ್ ಸಿಂಗ್‌ಗೆ ರೈತರ ಬಗ್ಗೆ ಕಾಳಜಿ ಇತ್ತು,: ಶರದ್ ಪವಾರ್

Prasthutha|

ಪುಣೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಅವರು ರೈತರ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದಾರೆ. ಆದರೆ, ಈಗಿನ ಪ್ರಧಾನಿ ರೈತರ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ.

- Advertisement -

ಪುಣೆಯಲ್ಲಿ ಆಯೋಜಿಸಲಾಗಿದ್ದ ಶೇತ್ಕರಿ ಆಕ್ರೋಶ ಮೋರ್ಚಾ ಸಮಾರೋಪ ಸಮಾರಂಭದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೆಲವು ರೈತರು ಆತ್ಮಹತ್ಯೆ ಮಾಡಿಕೊಂಡಾಗ ನ ಅಂದಿನ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್‌ ಅವರು ಅಮರಾವತಿಗೆ ಭೇಟಿ ನೀಡಿದ್ದು ನನಗೆ ನೆನಪಿದೆ. ಅವರು ಜನರು ಹಾಗೂ ರೈತರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದವರಾಗಿದ್ದರು. ಅಲ್ಲದೆ, ಆ ಸಂದರ್ಭದಲ್ಲಿ ಸುಮಾರು ₹72,000 ಕೋಟಿ ಕೃಷಿ ಸಾಲವನ್ನೂ ಸಿಂಗ್ ಮನ್ನಾ ಮಾಡಿದ್ದರು ಎಂದು ಪವಾರ್ ಮನಮೋಹನ್ ಸಿಂಗ್‌ರನ್ನು ಹಾಡಿಹೊಗಳಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಶರದ್ ಪವಾರ್‌ ಕೃಷಿ ಸಚಿವರಾಗಿದ್ದರು.

- Advertisement -

ಕಾರ್ಯಕ್ರಮದಲ್ಲಿ ಉದ್ಧವ್ ಠಾಕ್ರೆ, ಶಿವಸೇನೆಯ ಸಂಜಯ್ ರಾವುತ್‌ (ಯುಬಿಟಿ), ಕಾಂಗ್ರೆಸ್‌ನ ಬಾಳಾಸಾಹೇಬ್ ಥೋರಟ್, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಸೇರಿದಂತೆ ಮಹಾ ವಿಕಾಸ್ ಅಘಾಡಿಯ ಮುಂತಾದ ನಾಯಕರು ಭಾಗವಹಿಸಿದ್ದರು.

Join Whatsapp