ಲಖಿಂಪುರ್ ರೈತರ ಹತ್ಯೆ ಹಿಂದೆ ಕೇಂದ್ರ ಸಚಿವ ಅಜಯ್ ಮಿಶ್ರಾ ಕೈವಾಡ: ಉ.ಪ್ರ ಬಿಜೆಪಿ ನಾಯಕ

Prasthutha|

ಲಕ್ನೋ: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಹತ್ಯೆಗೆ ಕೇಂದ್ರ ಗೃಹ ಸಚಿವ ಅಜಯ್ ಮಿಶ್ರಾ ಕೈವಾಡವಿದೆ ಎಂದು ಬಿಜೆಪಿ ನಾಯಕ, ಉತ್ತರಪ್ರದೇಶ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಮ್ ಇಕ್ಬಾಲ್ ಸಿಂಗ್ ಆರೋಪಿಸಿದ್ದಾರೆ.

- Advertisement -

ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ತೆಗೆದುಹಾಕುವಂತೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ವಿನಂತಿಸಿದ್ದಾರೆ. “ಅವರು ಖಂಡಿತ ರೈತರ ಕ್ಷಮೆ ಕೇಳಬೇಕು. ಆದರೆ ಮಿಶ್ರಾ ತನ್ನ ಮಗನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಇದುವರೆಗೆ ಅವರು ಪಶ್ಚಾತ್ತಾಪ ಪಡಲಿಲ್ಲ. ಈ ಘಟನೆಯು ಮಾನವೀಯತೆಗೆ ಹಾನಿಕಾರಕವಾಗಿದೆ ಎಂದು ಅವರು ಹೇಳಿದ್ದಾರೆ.

‘ಅವರ ಮಗ ರೈತರನ್ನು ಕಾರು ಹರಿಸಿ ಕೊಂದು ಹಾಕಿದ. ಸುಪ್ರೀಂ ಕೋರ್ಟ್ ಸೂಚಿಸಿದ ನಂತರವೇ ಆಶಿಶ್ ಮಿಶ್ರಾನನ್ನು ಬಂಧಿಸಲಾಯಿತು. ಆದರೆ ಅಜಯ್ ಮಿಶ್ರಾ ಇನ್ನೂ ಸಂಪುಟದಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಸಿಂಗ್ ಹೇಳಿದರು.



Join Whatsapp