ನವದೆಹಲಿ: ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ-ಯುಎಪಿಎಯನ್ವಯ ಕೇಂದ್ರ ಗೃಹ ಸಚಿವಾಲಯವು ಬೇರೆ ಬೇರೆ ಸಂಘಟನೆಗಳ ಹತ್ತು ಮಂದಿಯನ್ನು ಉಗ್ರರೆಂದು ಪಟ್ಟಿ ಮಾಡಿದೆ. ಇವರೆಲ್ಲ ಹಿಜ್ಬುಲ್ ಮುಜಾಹಿದೀನ್, ಲಷ್ಕರ್ ಎ ತಯ್ಬಾ ಮೊದಲಾದ ಸಂಘಟನೆಗಳಿಗೆ ಸೇರಿದವರು.
ಪಾಕಿಸ್ತಾನ ಮೂಲದ ಹಬೀಬುಲ್ಲಾ ಮಲಿಕ್ ಅಲಿಯಾಸ್ ಸಾಜಿದ್ ಬಟ್, ಈಗ ಪಾಕಿಸ್ತಾನದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಬಾಸಿತ್ ಅಹ್ಮದ್ ರೇಸಿ, ಜಮ್ಮು ಮತ್ತು ಕಾಶ್ಮೀರದ ಸೋಪೋರ್ ನ ಇಮ್ತಿಯಾಝ್ ಅಹ್ಮದ್ ಖಂಡೂ, ಪೂಂಚ್ ನ ಜಾಫರ್ ಇಕ್ಬಾಲ್ ಅಲಿಯಾಸ್ ಸಲೀಂ, ಪುಲ್ವಾಮಾದ ಶೇಖ್ ಜಮೀಲ್ ಉರ್ ರೆಹಮಾನ್ ಅಲಿಯಾಸ್ ಶೇಖ್ ಸಾಹೇಬ್. ಪಾಕಿಸ್ತಾನದಲ್ಲಿರುವ ಶ್ರೀನಗರದ ಬಿಲಾಲ್ ಅಹ್ಮದ್ ಬೇಗ್ ಅಲಿಯಾಸ್ ಬಾಬರ್, ಪೂಂಚ್ ನ ರಫೀಕ್ ನೈ ಅಲಿಯಾಸ್ ಸುಲ್ತಾನ್, ದೋಡಾದ ಇರ್ಶಾದ್ ಅಹ್ಮದ್ ಅಲಿಯಾಸ್ ಇದ್ರೀಸ್, ಕುಪ್ವಾರದ ಅಹ್ಮದ್ ಪೀರ್ ಅಲಿಯಾಸ್ ಇಮ್ತಿಯಾಝ್, ಬಾರಾಮುಲ್ಲಾದ ಶೌಕತ್ ಅಹ್ಮದ್ ಶೇಖ್ ಅಲಿಯಾಸ್ ಶೌಕತ್ ಮೋಚಿ ಎಂಬವರನ್ನು ಉಗ್ರರು ಎಂದು ಘೋಷಿಸಲಾಗಿದೆ.
ಈ ಸಂಬಂಧ ಪ್ರತ್ಯೇಕ ನೋಟಿಸ್ ಹೊರಡಿಸಲಾಗಿದೆ. ಪೂಂಚ್ ನಲ್ಲಿ ಸೈನಿಕರ ಮೇಲೆ ದಾಳಿಯ ಸಹಿತ ಹಬೀಬುಲ್ಲಾ ಮಲಿಕ್ ಪ್ರಮುಖ ಎಂದು ಸಾರಲಾಗಿದೆ. ಫಿದಾಯಿನ್ ದಾಳಿಯ ಹಿಂದಿನ ಕೈ ಎನ್ನಲಾಗಿದೆ. ಈತ ಎಲ್ ಇಟಿ ಮತ್ತು ರೆಸಿಸ್ಟೆಟ್ ಫ್ರಂಟ್ ಸದಸ್ಯ ಎನ್ನಲಾಗಿದೆ.