ಏಷ್ಯನ್ ಲಾನ್ ಬೌಲ್ ಚಾಂಪಿಯನ್ ಶಿಪ್ ನಲ್ಲಿ ರಾಜ್ಯದ ರಾಘವೇಂದ್ರಗೆ ಬೆಳ್ಳಿ – ಭಾರತಕ್ಕೆ ಮೊದಲ ಪದಕ ತಂದ ಕನ್ನಡಿಗ

Prasthutha|

ಬೆಂಗಳೂರು; ಮಲೇಷಿಯಾದ ಜೋಹರ್ ನಲ್ಲಿ ನಡೆದ 3ನೇ ಏಷ್ಯನ್ ಲಾನ್  ಬೌಲ್ ಚಾಂಪಿಯನ್ ಶಿಪ್ ನ ಡಬಲ್ಸ್  ಕರ್ನಾಟಕದ ಅಂತಾರಾಷ್ಟ್ರೀಯ ದಿವ್ಯಾಂಗ ಕ್ರೀಡಾಪಟು ಪಿ. ರಾಘವೇಂದ್ರ ಬೆಳ್ಳಿ ಪದಕ ಗಳಿಸಿದ್ದಾರೆ. ಹರ್ಯಾಣದ ವಿಕಾಸ್ ನರ್ವಾಲ್ ಅವರ ಜೊತೆ ಸೇರಿ ಈ ಸಾಧನೆ ಮಾಡಿದ್ದಾರೆ.

- Advertisement -

ಈ ಕ್ರೀಡೆಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಉದ್ಯೋಗಿಯೂ ಆಗಿರುವ ರಾಘವೇಂದ್ರ ಅವರ ಸಾಧನೆಗೆ ಭಾರತೀಯ ಪ್ಯಾರಾಲಂಪಿಕ್ಸ್ ಸಮಿತಿ ಅಭಿನಂದನೆ ಸಲ್ಲಿಸಿದೆ. ರಾಘವೇಂದ್ರ ಅವರು ಕಳೆದ ವಾರ ಲಂಡನ್ ನಲ್ಲಿ ನಡೆದ ಕಾಮನ್ ವೆಲ್ತ್ ಪ್ಯಾರಾಲಂಪಿಕ್ಸ್ ನ ಕತ್ತಿವರೆಸೆಯಲ್ಲಿ 2 ಬೆಳ್ಳಿ ಪದಕ ಗೆದ್ದು ಮತ್ತೊಂದು ಮಹತ್ವದ ಸಾಧನೆ ಮಾಡಿದ್ದರು.

ರಾಘವೇಂದ್ರ ಅವರು 2020 ರಲ್ಲಿ ಲಂಡನ್ ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಇಪೀ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಹಾಗೂ ಗ್ರೂಪ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

Join Whatsapp